ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು.
Cross references
ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು.
ಅವನ ತಂದೆ ತಾಯಿಗಳು ಅವನನ್ನು ಹಿಡಿದು ಪಟ್ಟಣದ ಹಿರಿಯರ ಬಳಿಗೂ ಅವನ ಸ್ಥಳದ ಬಾಗಲಿನ ಬಳಿಗೂ ಹೊರಗೆ ತಂದು
ಬೋವಜನು ಪಟ್ಟಣದ ಬಾಗಲಲ್ಲಿ ಹೋಗಿ ಕುಳಿತಿರುವಾಗ ಇಗೋ, ಬೋವಜನು ಹೇಳಿದ್ದ ಆ ಸಂಬಂಧಿಕನು ಹಾದು ಹೋಗುತ್ತಿದ್ದನು. ಆಗ ಅವನು ಓ ಮನುಷ್ಯನೇ, ಈ ಕಡೆಗೆ ಬಂದು ಇಲ್ಲಿ ಕೂತುಕೋ ಅಂದನು. ಅವನು ಬಂದು ಕೂತುಕೊಂಡನು.
ಇದಕ್ಕೆ ಈ ಹೊತ್ತು ನೀವು ಸಾಕ್ಷಿಗಳಾಗಿದ್ದೀರಿ ಅಂದನು. ಆಗ ಬಾಗಲಲ್ಲಿರುವ ಸಮಸ್ತ ಜನರೂ ಹಿರಿಯರೂ ಹೇಳಿದ್ದೇನಂದರೆ--ನಾವು ಸಾಕ್ಷಿಗಳೇ; ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಕರ್ತನು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡುವ ವನಾಗಲಿ; ಎಫ್ರಾತದಲ್ಲಿ ಯೋಗ್ಯ ಕಾರ್ಯ ಮಾಡು, ಬೇತ್ಲೆಹೇಮಿನಲ್ಲಿ ಹೆಸರುಗೊಂಡವನಾಗಿರು.
ಪಟ್ಟಣವನ್ನು ಹಾದು ಬಾಗಲಿಗೆ ಹೊರಟುಹೋಗಿ ನನ್ನ ಪೀಠವನ್ನು ಬೀದಿಯಲ್ಲಿ ಸಿದ್ಧಪಡಿಸುತ್ತಾ ಇದ್ದೆನು.
ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು.
ಜ್ಞಾನವು ಬುದ್ಧಿಹೀನನಿಗೆ ನಿಲುಕದ್ದಾ ಗಿದೆ. ದ್ವಾರದಲ್ಲಿ ಅವನು ತನ್ನ ಬಾಯಿಯನ್ನು ತೆರೆಯು ವದಿಲ್ಲ.