Home Bibles ಸಾಮೇತಿಗಳು 31:24 · ಕನ್ನಡ ಬೈಬಲ್
ಸಾಮೇತಿಗಳು 31:24 · ಕನ್ನಡ ಬೈಬಲ್

ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ.

Cross references

ನ್ಯಾಯಾಧಿಪತಿಗಳು 14:12

ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು.

1 ಅರಸುಗಳು 10:28

ಇದಲ್ಲದೆ ಸೊಲೊಮೋನನಿಗೆ ಐಗುಪ್ತ ದಿಂದ ಕುದುರೆಗಳೂ ಸಣಬಿನ ನೂಲು ತರಲ್ಪಟ್ಟವು. ಅರಸನ ವರ್ತಕರು ಕ್ರಯಕ್ಕೆ ಸಣಬಿನ ನೂಲನ್ನು ತೆಗೆದುಕೊಂಡರು.ಐಗುಪ್ತದಿಂದ ಹೊರಟುಬರುವ ರಥದ ಕ್ರಯವು ಆರು ನೂರು ಬೆಳ್ಳಿ ಶೆಕೇಲುಗಳು, ಕುದುರೆಯ ಕ್ರಯವು ನೂರ ಐವತ್ತು ಬೆಳ್ಳಿ ಶೆಕೇಲುಗಳು. ಈ ಪ್ರಕಾರ ಹಿತ್ತಿಯರ ಅರಸುಗಳೆಲ್ಲರಿಗೂ ಅರಾಮ್ಯದ ಅರಸುಗಳಿಗೂ ಅವರ ಮುಖಾಂತರ ತಕ್ಕೊಂಡು ಬರುತ್ತಿದ್ದರು.

ಸಾಮೇತಿಗಳು 31:13

ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ.

ಸಾಮೇತಿಗಳು 31:14

ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ.

ಸಾಮೇತಿಗಳು 31:19

ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ.

ಯೆಹೆಜ್ಕೇಲ 27:16

ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾಮಿನವರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.

ಲೂಕ 16:19

ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.

Interlinear

Choose Theme