Home Bibles ☰ Books ಹೊಶೇಯ 12:12 · ಕನ್ನಡ ಬೈಬಲ್
ಹೊಶೇಯ 12:12 · ಕನ್ನಡ ಬೈಬಲ್

ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು; ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.

Cross references

ಆದಿಕಾಂಡ 27:43

ಆದದರಿಂದ ಈಗ ನನ್ನ ಮಗನೇ, ನನ್ನ ಮಾತಿಗೆ ವಿಧೇಯನಾಗು; ಎದ್ದು ಹಾರಾನಿನಲ್ಲಿರುವ ನನ್ನ ಸಹೋದರನಾದ ಲಾಬಾನನ ಬಳಿಗೆ ಓಡಿಹೋಗು.

ಆದಿಕಾಂಡ 28:1

ಇಸಾಕನು ಯಾಕೋಬನನ್ನು ಕರೆದು ಆಶೀರ್ವದಿಸಿ ಅವನಿಗೆ ಆಜ್ಞಾಪಿಸಿದ್ದೇ ನಂದರೆ--ಕಾನಾನ್ಯರ ಕುಮಾರ್ತೆಗಳಲ್ಲಿ ನೀನು ಹೆಂಡತಿ ಯನ್ನು ತಕ್ಕೊಳ್ಳಬಾರದು.

ಆದಿಕಾಂಡ 29:18

ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.

ಆದಿಕಾಂಡ 31:41

ನಿನ್ನ ಇಬ್ಬರು ಕುಮಾರ್ತೆಯರಿಗಾಗಿ ಹದಿನಾಲ್ಕು ವರುಷ, ನಿನ್ನ ಮಂದೆಗಳಿಗೋಸ್ಕರ ಆರು ವರುಷ, ಈ ಪ್ರಕಾರ ಇಪ್ಪತ್ತು ವರುಷ ನಿನ್ನ ಮನೆಯಲ್ಲಿ ಇದ್ದು ಸೇವೆಮಾಡಿದೆನು; ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದಿ.

ಆದಿಕಾಂಡ 32:27

ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.

ದ್ವಿತೀಯೋಪದೇಶಕಾಂಡ 26:5

ಆ ಮೇಲೆ ನೀನು ಉತ್ತರಕೊಟ್ಟು ನಿನ್ನ ದೇವರಾದ ಕರ್ತನ ಮುಂದೆ--ನನ್ನ ತಂದೆ ನಾಶ ವಾಗುವ ಅರಾಮ್ಯನಾಗಿ ಐಗುಪ್ತಕ್ಕೆ ಇಳಿದು ಹೋಗಿ ಅಲ್ಲಿ ಸ್ವಲ್ಪ ಮಂದಿಯ ಸಂಗಡ ಪರವಾಸವಾಗಿದ್ದು ಅಲ್ಲಿ ದೊಡ್ಡದಾದ, ಬಲಿಷ್ಠವಾದ, ಅಧಿಕವಾದ ಜನಾಂಗವಾದನು.

ಹೊಶೇಯ 4:15

ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿ ದರೂ ಯೆಹೂದವು ಅಡ್ಡಿಯಾಗದಿರಲಿ, ಗಿಲ್ಗಾಲಿಗೆ ಹೋಗದೆ ಇಲ್ಲವೆ ಬೇತಾವೆನಿಗೆ ಏರದೆ ಕರ್ತನ ಜೀವದಾಣೆ ಎಂದು ಪ್ರಮಾಣಮಾಡದೆ ಇರ್ರಿ.

ಹೊಶೇಯ 6:8

ಗಿಲ್ಯಾದು ಕೆಟ್ಟ ಕೆಲಸ ಮಾಡುವವರ ಮತ್ತು ರಕ್ತದಿಂದ ಅಪವಿತ್ರಮಾಡಿದ ಪಟ್ಟಣವಾಗಿದೆ.

Interlinear

Choose Theme