Home Bibles ಸಾಮೇತಿಗಳು 15:14 · ಕನ್ನಡ ಬೈಬಲ್
ಸಾಮೇತಿಗಳು 15:14 · ಕನ್ನಡ ಬೈಬಲ್

ವಿವೇಕವುಳ್ಳವನ ಹೃದಯವು ತಿಳುವಳಿಕೆಯನ್ನು ಹುಡುಕುತ್ತದೆ; ಬುದ್ಧಿಹೀನರ ಬಾಯಿಯು ಬುದ್ಧಿಹೀನತೆ ಯನ್ನೇ ತಿನ್ನುತ್ತದೆ.

Cross references

1 ಅರಸುಗಳು 3:6

ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ.

ಕೀರ್ತನೆಗಳು 119:97

ನಿನ್ನ ನ್ಯಾಯಪ್ರಮಾಣವನ್ನು ನಾನು ಎಷ್ಟೋ ಪ್ರೀತಿ ಮಾಡುತ್ತೇನೆ, ದಿನವೆಲ್ಲಾ ಅದೇ ನನ್ನ ಧ್ಯಾನವು.

ಕೀರ್ತನೆಗಳು 119:100

ನಾನು ಪೂರ್ವಿಕರಿಗಿಂತ ವಿವೇಕಿಯಾಗಿದ್ದೇನೆ; ನಿನ್ನ ಕಟ್ಟಳೆಗಳನ್ನು ಕೈಕೊಂಡಿದ್ದೇನೆ.

ಸಾಮೇತಿಗಳು 1:5

ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು.

ಸಾಮೇತಿಗಳು 9:9

ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು.

ಸಾಮೇತಿಗಳು 12:23

ಜಾಣನು ತಿಳಿದದ್ದನ್ನು ಗುಪ್ತಪಡಿಸುತ್ತಾನೆ. ಅವಿವೇಕಿ ಗಳ ಹೃದಯವು ಅವಿವೇಕತ್ವವನ್ನು ಪ್ರಕಟಿಸುತ್ತದೆ.

ಸಾಮೇತಿಗಳು 18:15

ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ಮತ್ತು ಜ್ಞಾನಿಯ ಕಿವಿಯು ತಿಳುವಳಿಕೆ ಯನ್ನು ಹುಡುಕುತ್ತದೆ.

ಯೆಶಾಯ 30:10

ಅವರು ನೋಡುವವರಿಗೆ--ನೋಡಬೇಡಿರೆಂದು, ದಿವ್ಯದರ್ಶಿಗಳಿಗೆ ನಿಮಗೆ ದರ್ಶನವಾಗದಿರಲೆನ್ನು ತ್ತಾರೆ. ಪ್ರವಾದಿಗಳಿಗೆ--ನಮಗೆ ನ್ಯಾಯವಾದವು ಗಳನ್ನು ಪ್ರವಾದಿಸಬೇಡಿರಿ ನಯವಾದವುಗಳನ್ನೇ ನುಡಿ ಯಿರಿ, ಮೋಸವಾದವುಗಳನ್ನೆ ಪ್ರವಾದಿಸಿರಿ ಅನ್ನು ತ್ತಾರೆ.

ಯೆಶಾಯ 44:20

ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು.

ಹೊಶೇಯ 12:1

ಎಫ್ರಾಯಾಮು ಗಾಳಿಯನ್ನೇ ಸೇವಿಸುತ್ತದೆ; ಪಶ್ಚಿಮದ ಗಾಳಿಯ ಹಿಂದೆ ಹಿಂಬಾಲಿಸಿ ಕೊಂಡು ಹೋಗುತ್ತದೆ. ಅವರು ಪ್ರತಿದಿನವು ಸುಳ್ಳನ್ನೂ ನಾಶನವನ್ನೂ ಹೆಚ್ಚಿಸಿ ಅಶ್ಯೂರ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡು ಐಗುಪ್ತಕ್ಕೆ ಎಣ್ಣೆಯನ್ನು ಹೊತ್ತುಕೊಂಡು ಹೋಗುತ್ತಾರೆ.

ಅಪೋಸ್ತಲರ ಕೃತ್ಯಗಳು 17:11

ಅಲ್ಲಿಯವರು ಥೆಸಲೊನೀಕದವರಿಗಿಂತ ಸದ್ಗುಣ ವುಳ್ಳವರಾಗಿದ್ದು ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀ ಕರಿಸಿ ಇವರು ಹೇಳುವ ಮಾತುಗಳು ಹೌದೋ ಏನೋ ಎಂದು ಪ್ರತಿದಿನವೂ ಬರಹಗಳನ್ನು ಶೋಧಿ ಸುತ್ತಿದ್ದರು.

2 ಪೇತ್ರ 3:18

ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆ ಇರಲಿ. ಆಮೆನ್‌.

Interlinear

Choose Theme