Home Bibles ಸಾಮೇತಿಗಳು 15:13 · ಕನ್ನಡ ಬೈಬಲ್
ಸಾಮೇತಿಗಳು 15:13 · ಕನ್ನಡ ಬೈಬಲ್

ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.

Cross references

ನೆಹೆಮ್ಯ 2:2

ಆದಕಾರಣ ಅರಸನು ನನಗೆ--ನಿನಗೆ ಕಾಯಿಲೆ ಇಲ್ಲದೆ ನಿನ್ನ ಮುಖವು ದುಃಖವಾಗಿರುವದೇನು? ನಿನಗೆ ರೋಗವಿಲ್ಲವಲ್ಲಾ? ಇದು ಮನೋ ದುಃಖವಲ್ಲದೆ ಮತ್ತೊಂದಲ್ಲ ಅಂದನು.

ಸಾಮೇತಿಗಳು 12:25

ಮನುಷ್ಯನ ಹೃದ ಯದಲ್ಲಿರುವ ಭಾರವು ಅದನ್ನು ಕುಗ್ಗಿಸುವದು; ಒಳ್ಳೆಯ ಮಾತು ಅದನ್ನು ಹಿಗ್ಗುವಂತೆ ಮಾಡುವದು.

ಸಾಮೇತಿಗಳು 15:15

ಬಾಧಿತರ ದಿನಗಳೆಲ್ಲವೂ ಕೆಟ್ಟ ವುಗಳೇ. ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.

ಸಾಮೇತಿಗಳು 17:22

ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.

ಸಾಮೇತಿಗಳು 18:14

ತನ್ನ ಬಲಹೀನತೆಯನ್ನು ಮನುಷ್ಯನ ಆತ್ಮವು ಸಹಿಸುವದು; ಗಾಯಪಟ್ಟ ಆತ್ಮವನ್ನು ಸಹಿಸುವವರು ಯಾರು?

ಯೋಹಾನ 14:1

ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.

2 ಕೊರಿಂಥದವರಿಗೆ 1:12

ನಾವು ಮನುಷ್ಯಜ್ಞಾನದಿಂದಲ್ಲ, ಆದರೆ ಸರಳತೆಯಿಂದಲೂ ಭಕ್ತಿಯ ನಿಷ್ಕಪಟದಿಂದಲೂ ದೇವರ ಕೃಪೆಯಿಂದಲೂ ಲೋಕದಲ್ಲಿ ಮತ್ತು ಇನ್ನೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ನಡಕೊಂಡೆವೆಂದು ನಮ್ಮ ಮನಸ್ಸಿನ ಸಾಕ್ಷಿಯೇ ನಮ ಗಿರುವ ಸಂತೋಷವಾಗಿದೆ.

2 ಕೊರಿಂಥದವರಿಗೆ 2:7

ಇನ್ನು ಮೇಲೆ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು.

2 ಕೊರಿಂಥದವರಿಗೆ 7:10

ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

Interlinear

Choose Theme