Home Bibles ಹೊಶೇಯ 12:1 · ಕನ್ನಡ ಬೈಬಲ್
ಹೊಶೇಯ 12:1 · ಕನ್ನಡ ಬೈಬಲ್

ಎಫ್ರಾಯಾಮು ಗಾಳಿಯನ್ನೇ ಸೇವಿಸುತ್ತದೆ; ಪಶ್ಚಿಮದ ಗಾಳಿಯ ಹಿಂದೆ ಹಿಂಬಾಲಿಸಿ ಕೊಂಡು ಹೋಗುತ್ತದೆ. ಅವರು ಪ್ರತಿದಿನವು ಸುಳ್ಳನ್ನೂ ನಾಶನವನ್ನೂ ಹೆಚ್ಚಿಸಿ ಅಶ್ಯೂರ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡು ಐಗುಪ್ತಕ್ಕೆ ಎಣ್ಣೆಯನ್ನು ಹೊತ್ತುಕೊಂಡು ಹೋಗುತ್ತಾರೆ.

Cross references

2 ಅರಸುಗಳು 15:19

ಆದರೆ ಅಶ್ಶೂರದ ಅರಸನಾದ ಪೂಲನು ದೇಶದ ಮೇಲೆ ಬಂದನು. ಆಗ ಮೆನಹೇಮನು ರಾಜ್ಯವನ್ನು ತನ್ನ ಕೈಯಲ್ಲಿ ಧೃಢಪಡಿಸಲು ಅವನ ಕೈ ತನ್ನ ಸಂಗಡ ಇರುವ ಹಾಗೆ ಪೂಲನಿಗೆ ಸಾವಿರ ಬೆಳ್ಳಿ ತಲಾಂತು ಗಳನ್ನು ಕೊಟ್ಟನು.

2 ಅರಸುಗಳು 17:4

ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.

2 ದಿನವೃತ್ತಾಂತ 21:11

ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಸ್ಥಳಗಳನ್ನು ಮಾಡಿ ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ ಹಾಗೆಯೇ ಮಾಡಲು ಯೆಹೂ ದದವರನ್ನು ಬಲವಂತ ಮಾಡಿದನು.

ಯೋಬ 15:2

ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಮೂಡಣದ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವದು ಉಂಟೋ?

ಕೀರ್ತನೆಗಳು 78:36

ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು.

ಯೆಶಾಯ 30:6

ದಕ್ಷಿಣ ಸೀಮೆಯ ಮೃಗಗಳ ವಿಷಯವಾದ ದೈವೋಕ್ತಿ. ಇಕ್ಕಟ್ಟಾದ ಶ್ರಮೆಯುಳ್ಳ ದೇಶಕ್ಕೆ ಪ್ರಾಯ ಮತ್ತು ಮುದಿ ಸಿಂಹವೂ, ಸರ್ಪವೂ, ಹಾರುವ ಉರಿ ಮಂಡಲ ಸರ್ಪವೂ ಬರುವಲ್ಲಿಗೆ ಅವರು ಕತ್ತೆಮರಿ ಗಳ ಬೆನ್ನುಗಳ ಮೇಲೆ ತಮ್ಮ ಬದುಕನ್ನೂ ಒಂಟೆಗಳ ಡಬ್ಬಗಳ ಮೇಲೆ ತಮ್ಮ ದ್ರವ್ಯಗಳನ್ನೂ ಪ್ರಯೋಜನ ವಲ್ಲದ ಜನಕ್ಕೆ ತಕ್ಕೊಂಡು ಹೋಗುತ್ತಾರೆ.

ಯೆರೆಮಿಯ 22:22

ಆದರೆ ಅವರು ನನ್ನ ಆಲೋಚನೆಯಲ್ಲಿ ನಿಂತಿದ್ದರೆ, ಅವರು ಜನರಿಗೆ ನನ್ನ ವಾಕ್ಯಗಳನ್ನು ಕೇಳಕೊಟ್ಟು ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು.

ಯೆಹೆಜ್ಕೇಲ 17:10

ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.

ಹೊಶೇಯ 4:15

ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿ ದರೂ ಯೆಹೂದವು ಅಡ್ಡಿಯಾಗದಿರಲಿ, ಗಿಲ್ಗಾಲಿಗೆ ಹೋಗದೆ ಇಲ್ಲವೆ ಬೇತಾವೆನಿಗೆ ಏರದೆ ಕರ್ತನ ಜೀವದಾಣೆ ಎಂದು ಪ್ರಮಾಣಮಾಡದೆ ಇರ್ರಿ.

ಹೊಶೇಯ 5:13

ಎಫ್ರಾಯಾಮು ತನ್ನ ರೋಗವನ್ನು ಯೆಹೂದವು ತನ್ನ ಗಾಯವನ್ನು ನೋಡಿದಾಗ ಎಫ್ರಾಯೀಮ್‌ ಅಶ್ಯೂರಕ್ಕೆ ಹೋಗಿ ಅರಸನಾದ ಯಾರೇಬನ ಬಳಿಗೆ ಕಳುಹಿಸಿತು; ಆದಾಗ್ಯೂ ಅವನು ನಿಮ್ಮನ್ನು ಸ್ವಸ್ಥಮಾಡ ಲಿಲ್ಲ, ಇಲ್ಲವೆ ನಿಮ್ಮ ಗಾಯವನ್ನು ಗುಣಪಡಿಸಲೂ ಇಲ್ಲ.

ಹೊಶೇಯ 7:1

ನಾನು ಇಸ್ರಾಯೇಲನ್ನು ಗುಣಮಾಡ ಬೇಕೆಂದಿರುವಾಗ ಎಫ್ರಾಯಾಮಿನ ದುಷ್ಕೃತ್ಯವನ್ನೂ ಸಮಾರ್ಯದ ಕೆಟ್ಟತನವನ್ನೂ ಕಂಡು ಹಿಡಿಯುತ್ತೇನೆ; ಅವರು ಸುಳ್ಳನ್ನು ನಡಿಸುತ್ತಾರೆ; ಕಳ್ಳನು ಒಳಗೆ ಬರುತ್ತಾನೆ. ಕಳ್ಳರ ಗುಂಪು ಹೊರಗೆ ಸುಲುಕೊಳ್ಳು ತ್ತದೆ.

ಹೊಶೇಯ 8:7

ಅವರು ಗಾಳಿಯನ್ನು ಬಿತ್ತಿ ದ್ದಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅದಕ್ಕೆ ಕಾಂಡ ವಿಲ್ಲ; ಮೊಳಕೆಯು ಆಹಾರವನ್ನು ಕೊಡುವದಿಲ್ಲ. ಒಂದು ವೇಳೆ ಅದು ಕೊಟ್ಟರೂ ಪರಕೀಯರು ಅದನ್ನು ನುಂಗುತ್ತಾರೆ.

ಹೊಶೇಯ 11:9

ನನ್ನ ಕೋಪದ ಉರಿಯನ್ನು ನಾನು ತೀರಿಸುವದಿಲ್ಲ, ನಾನು ಎಫ್ರಾಯಾಮನ್ನು ನಾಶ ಮಾಡಲು ತಿರುಗಿಕೊಳ್ಳುವದಿಲ್ಲ; ನಾನು ದೇವರೇ ಮನುಷ್ಯನಲ್ಲ, ನಿಮ್ಮ ಮಧ್ಯದಲ್ಲಿರುವಾತನಾದ ಪರಿ ಶುದ್ಧನೇ. ಪಟ್ಟಣದೊಳಗೆ ನಾನು ಪ್ರವೇಶಿಸುವದಿಲ್ಲ.

ಹೊಶೇಯ 11:12

ಎಫ್ರಾಯಾಮು ಸುಳ್ಳಿನಿಂದ ಮತ್ತು ಇಸ್ರಾ ಯೇಲಿನ ಮನೆಯವರು ಮೋಸದಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ಆದರೆ ಯೆಹೂದನು ಇನ್ನೂ ದೇವರ ಸಂಗಡ ಆಳುತ್ತಾನೆ; ಮತ್ತು ಪರಿಶುದ್ಧರ ಸಂಗಡ ನಂಬಿಗಸ್ತನಾಗಿದ್ದಾನೆ.

Interlinear

Choose Theme