Home Bibles ಸಾಮೇತಿಗಳು 14 · ಕನ್ನಡ ಬೈಬಲ್ ||

ಸಾಮೇತಿಗಳು

Chapter 14

ಕನ್ನಡ ಬೈಬಲ್
1ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ. 2ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ; ತನ್ನ ಮಾರ್ಗಗಳಲ್ಲಿ ವಕ್ರತೆಯುಳ್ಳವನು ಆತನನ್ನು ಅಸಡ್ಡೆಮಾಡುತ್ತಾನೆ. 3ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು. 4ಎತ್ತುಗಳು ಇಲ್ಲದೆ ಇರು ವಲ್ಲಿ ಗೋದಲಿಯು ಶುದ್ಧಿಯಾಗಿದೆ; ಎತ್ತಿನ ಬಲದಿಂದ ಬಹಳ ವೃದ್ಧಿಯು ಉಂಟಾಗುತ್ತದೆ. 5ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ. 6ಹಾಸ್ಯ ಮಾಡುವವನು ಜ್ಞಾನವನ್ನು ಹುಡು ಕಿದರೂ ಅದನ್ನು ಕಂಡುಕೊಳ್ಳುವದಿಲ್ಲ; ವಿವೇಚಿಸುವವನಿಗೆ ತಿಳುವಳಿಕೆಯು ಸುಲಭವಾಗಿದೆ. 7ನೀನು ಬುದ್ಧಿಹೀನನಲ್ಲಿ ತಿಳುವಳಿಕೆಯ ತುಟಿಗಳನ್ನು ಕಾಣದೆ ಹೋದರೆ ಅವನ ಬಳಿಯಿಂದ ನೀನು ಹೋಗು. 8ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ. 9ಬುದ್ಧಿಹೀನರು ಪಾಪಕ್ಕೆ ಹಾಸ್ಯಮಾಡುತ್ತಾರೆ; ನೀತಿ ವಂತರಲ್ಲಿ ದಯೆ ಇದೆ. 10ಹೃದಯಕ್ಕೆ ತನ್ನ ವ್ಯಾಕುಲ ತೆಯು ತಿಳಿಯುತ್ತದೆ; ಪರನು ತನ್ನ ಸಂತೋಷದಲ್ಲಿ ಸೇರುವದಿಲ್ಲ. 11ದುಷ್ಟರ ಮನೆಯು ಕೆಡವಲ್ಪಡುವದು; ಯಥಾರ್ಥವಂತರ ಗುಡಾರವು ಏಳಿಗೆಯಾಗುವದು. 12ಒಬ್ಬ ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗ ವಿದೆ. ಅದರ ಅಂತ್ಯವು ಮರಣದ ಮಾರ್ಗಗಳೇ. 13ನಗೆಯಲ್ಲಿಯೂ ಹೃದಯವು ದುಃಖದಿಂದ ಇರು ವದು; ಅದರ ಉಲ್ಲಾಸದ ಅಂತ್ಯವು ವ್ಯಾಕುಲವೇ. 14ಹೃದಯದಲ್ಲಿ ಹಿಂಜರಿಯುವವನು ತನ್ನ ಸ್ವಂತ ಮಾರ್ಗಗಳಿಂದ ತುಂಬಿಕೊಳ್ಳುವನು; ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು. 15ಮೂಢರು ಪ್ರತಿಯೊಂದು ಮಾತನ್ನು ನಂಬುತ್ತಾರೆ; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. 16ಜ್ಞಾನಿ ಯು ಭಯಪಟ್ಟು ಕೆಟ್ಟತನದಿಂದ ಹೊರಟುಹೋಗು ವನು; ಬುದ್ಧಿಹೀನನು ಕೋಪಿಸಿಕೊಂಡು ಧೈರ್ಯದಿಂದ ಇರುತ್ತಾನೆ. 17ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ; ಕುಯುಕ್ತಿಯುಳ್ಳವನು ಹಗೆಮಾಡು ತ್ತಾನೆ. 18ಮೂಢರು ಮೂರ್ಖತನಕ್ಕೆ ಬಾಧ್ಯರಾಗು ತ್ತಾರೆ; ಜಾಣರು ತಿಳುವಳಿಕೆಯ ಕಿರೀಟವನ್ನು ಪಡೆದು ಕೊಳ್ಳುತ್ತಾರೆ. 19ಒಳ್ಳೆಯವರಿಗೆ ದುಷ್ಟರು ಬಾಗುತ್ತಾರೆ; ದುಷ್ಟರು ನೀತಿವಂತರ ದ್ವಾರಗಳಲ್ಲಿ ಬಗ್ಗಿಕೊಳ್ಳುತ್ತಾರೆ. 20ಬಡವನು ತನ್ನ ನೆರೆಯವನಿಂದ ಹಗೆಮಾಡಲ್ಪಡುವನು; ಐಶ್ವರ್ಯವಂತನಿಗೆ ಬಹು ಜನ ಮಿತ್ರರು. 21ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪ ಮಾಡುತ್ತಾನೆ; ಬಡವರ ಮೇಲೆ ಕನಿಕರ ತೋರಿ ಸುವವನು ಧನ್ಯನು. 22ಕೆಟ್ಟದ್ದನ್ನು ಕಲ್ಪಿಸುವವರು ತಪ್ಪು ಮಾಡುತ್ತಾರಲ್ಲವೇ? ಒಳ್ಳೆಯದನ್ನು ಕಲ್ಪಿಸುವವರಿಗೆ ಕರುಣೆಯೂ ಸತ್ಯವೂ ಇರುವವು. 23ಎಲ್ಲಾ ಪ್ರಯಾಸ ದಲ್ಲಿ ಲಾಭವಿದೆ; ತುಟಿಗಳ ಮಾತು ಬಡತನಕ್ಕೆ ಮಾತ್ರ ದಾರಿ. 24ಜ್ಞಾನವಂತರ ಕಿರೀಟವು ಅದರ ಐಶ್ವ ರ್ಯವೇ; ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವೇ. 25ಸತ್ಯ ಸಾಕ್ಷಿಯು ಪ್ರಾಣಗಳನ್ನು ತಪ್ಪಿಸುತ್ತಾನೆ; ಮೋಸದ ಸಾಕ್ಷಿಯು ಸುಳ್ಳುಗಳನ್ನು ಆಡು ತ್ತಾನೆ. 26ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು. 27ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ. 28ಜನ ಸಮೂಹದಲ್ಲಿ ಅರಸನ ಘನತೆ ಇದೆ; ಜನರ ಕೊರತೆಯಲ್ಲಿ ರಾಜಪುತ್ರನ ನಾಶ. 29ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು. 30ಸ್ವಸ್ಥವಾದ ಹೃದಯವು ದೇಹಕ್ಕೆ ಜೀವ; ಮತ್ಸರವು ಎಲುಬುಗಳಿಗೆ ಕ್ಷಯವು. 31ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ. 32ದುಷ್ಟನು ತನ್ನ ದುಷ್ಟತನದಲ್ಲಿ ನೂಕ ಲ್ಪಡುತ್ತಾನೆ; ಮರಣದಲ್ಲಿ ನೀತಿವಂತನಿಗೆ ನಿರೀಕ್ಷೆ ಇದೆ. 33ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆ ಯಾಗಿದೆ; ಬುದ್ಧಿಹೀನರಲ್ಲಿರುವದು ಪ್ರಕಟವಾಗುತ್ತದೆ. 34ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ. 35ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.

Choose Theme