Home Bibles ಸಾಮೇತಿಗಳು 14:3 · ಕನ್ನಡ ಬೈಬಲ್
ಸಾಮೇತಿಗಳು 14:3 · ಕನ್ನಡ ಬೈಬಲ್

ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು.

Cross references

1 ಸಮುವೇಲ 2:3

ಇನ್ನು ಮೇಲೆ ಗರ್ವದಿಂದ ಮಾತನಾಡಬೇಡಿರಿ. ನಿಮ್ಮ ಬಾಯಿಂದ ಕಠಿಣ ಮಾತು ಹೊರಡಬಾರದು. ಯಾಕಂದರೆ ಕರ್ತನು ತಿಳುವಳಿಕೆಯುಳ್ಳ ದೇವರು. ಆತನಿಂದ ಕ್ರಿಯೆಗಳು ತೂಗಲ್ಪಡುತ್ತವೆ.

ಯೋಬ 5:21

ನಾಲಿಗೆಯೆಂಬ ಬೆತ್ತಕ್ಕೆ ಮರೆ ಯಾಗುವಿ; ಅದು ಬಂದಾಗ ನೀನು ನಾಶಕ್ಕೆ ಭಯ ಪಡುವದಿಲ್ಲ.

ಕೀರ್ತನೆಗಳು 12:3

ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು.

ಕೀರ್ತನೆಗಳು 31:18

ನೀತಿವಂತರ ಮೇಲೆ ಗರ್ವದಿಂದಲೂ ತಿರಸ್ಕಾರದಿಂದಲೂ ಕಠಿಣ ವಾಗಿ ಮಾತನಾಡುವ ಸುಳ್ಳಿನ ತುಟಿಗಳು ಮೌನ ವಾಗಲಿ.

ಕೀರ್ತನೆಗಳು 52:1

ಓ ಪರಾಕ್ರಮಿಯೇ, ಕೆಟ್ಟತನದಲ್ಲಿ ನಿನ್ನ ಷ್ಟಕ್ಕೆ ನೀನೇ ಹೆಚ್ಚಳಪಡುವದು ಯಾಕೆ? ದೇವರ ಒಳ್ಳೇತನವು ಯಾವಾಗಲೂ ಇರುವದು.

ಕೀರ್ತನೆಗಳು 57:4

ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.

ಸಾಮೇತಿಗಳು 12:6

ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.

ಸಾಮೇತಿಗಳು 13:3

ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು.

ಸಾಮೇತಿಗಳು 18:6

ಅವಿವೇಕಿಯ ತುಟಿಗಳು ಕಲಹದಲ್ಲಿ ಸೇರುವದರಿಂದ ಏಟುಗಳನ್ನು ತಿನ್ನುವದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.

ಸಾಮೇತಿಗಳು 18:7

ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ.

ಸಾಮೇತಿಗಳು 21:24

ಸೊಕ್ಕೇರಿದ ಗರ್ವದಲ್ಲಿ ವರ್ತಿಸುವ ವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕನು.

ಸಾಮೇತಿಗಳು 22:8

ಕೆಟ್ಟತನವನ್ನು ಬಿತ್ತುವವನು ವ್ಯರ್ಥ ವನ್ನು ಕೊಯ್ಯುವನು; ಅವನ ಕೋಪದ ದಂಡವು ಬಿದ್ದುಹೋಗುವದು.

ಸಾಮೇತಿಗಳು 28:25

ಗರ್ವದ ಹೃದಯವುಳ್ಳವನು ಕಲಹ ವನ್ನೆಬ್ಬಿಸುವನು; ಕರ್ತನಲ್ಲಿ ಭರವಸವಿಡುವವನು ಪುಷ್ಟ ನಾಗುವನು.

ದಾನಿಯೇಲ 7:20

ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ ಆ ಎದ್ದು ಬಂದ ಬೇರೊಂದರ ಕೊಂಬಿನ ವಿಷಯವಾಗಿಯೂ ಹೌದು, ಕಣ್ಣುಗಳು ಳ್ಳಂತ, ಬಹು ದೊಡ್ಡ ಮಾತುಗಳನ್ನು ಮಾತನಾಡಿದ ಬಾಯಿಯಂತ, ತನ್ನ ಜೊತೆಯವರಿಗಿಂತ ಬಲವಾದ ನೋಟವುಳ್ಳಂತ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥ ವನ್ನು ತಿಳಿಯಬೇಕೆಂದಿದ್ದೆನು.

ರೋಮಾಪುರದವರಿಗೆ 10:9

ನೀನು ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ.

ಯಾಕೋಬ 3:5

ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ.

2 ಪೇತ್ರ 2:18

ತಪ್ಪಾದ ಮಾರ್ಗದಲ್ಲಿ ಜೀವಿಸುವವರಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ದೊಡ್ಡ ದೊಡ್ಡ ಮಾತುಗಳನ್ನಾಡಿ ಶರೀರದ ದುರಾಶೆಗಳನ್ನು ಹುಟ್ಟಿಸಿ ಹೆಚ್ಚಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

ಪ್ರಕಟನೆ 3:10

ನೀನು ನನ್ನ ಸಹನ ವಾಕ್ಯವನ್ನು ಕಾಪಾಡಿದ್ದರಿಂದ ಭೂಮಿಯ ಮೇಲೆ ವಾಸ ಮಾಡುವವ ರನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರು ವದಕ್ಕಿರುವ ಶೋಧನೆಯ ಸಮಯದಿಂದ ನಾನು ಸಹ ನಿನ್ನನ್ನು ಕಾಪಾಡುವೆನು.

ಪ್ರಕಟನೆ 12:11

ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವ ನನ್ನು ಜಯಿಸಿದರು.

ಪ್ರಕಟನೆ 15:5

ಇದಾದ ಮೇಲೆ ನಾನು ನೋಡಿದಾಗ ಇಗೋ, ಪರಲೋಕದಲ್ಲಿರುವ ಸಾಕ್ಷೀ ಗುಡಾರದ ಆಲಯವು ತೆರೆಯಲ್ಪಟ್ಟಿತು.

Interlinear

Choose Theme