ಅವರು ಅವನ ಅಪ್ಪಣೆ ಯನ್ನೂ ಸಮಸ್ತ ಸಭೆಯ ಅಪ್ಪಣೆಯನ್ನೂ ಸಮಸ್ತ ಗುಡಾರದ ಮುಂದೆ ಕಾಪಾಡಲಿ, ಮತ್ತು ಗುಡಾರದ ಸೇವೆಯನ್ನು ಮಾಡಲಿ.
Cross references
ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ.
ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು.
ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು.
ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು.
ಇಸ್ರಾಯೇಲ್ ಮಕ್ಕಳ ಅರ್ಧ ಪಾಲಿ ನಿಂದ ಮನುಷ್ಯರಿಂದಲೂ ಕತ್ತೆಗಳಿಂದಲೂ ಮಂದೆಗ ಳಿಂದಲೂ ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತಕ್ಕೊಂಡು ಅವುಗಳನ್ನು ಕರ್ತನ ಗುಡಾರದ ಕಾಯಿದೆಯನ್ನು ಕಾಯುವ ಲೇವಿಯರಿಗೆ ಕೊಡಬೇಕು ಅಂದನು.
ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು.
ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು.
ಈ ಶೆಲೋಮೊತನೂ ಅವನ ಸಹೋದರರೂ ಅರಸ ನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆಮಾಡಿದ ಪ್ರತಿಷ್ಠವಾದವುಗಳ ಬೊಕ್ಕಸಗಳ ಮೇಲೆಯೂ ಇದ್ದರು.