Home Bibles ಅಂಕೆಗಳ ಪುಸ್ತಕ 31:30 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 31:30 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳ ಅರ್ಧ ಪಾಲಿ ನಿಂದ ಮನುಷ್ಯರಿಂದಲೂ ಕತ್ತೆಗಳಿಂದಲೂ ಮಂದೆಗ ಳಿಂದಲೂ ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತಕ್ಕೊಂಡು ಅವುಗಳನ್ನು ಕರ್ತನ ಗುಡಾರದ ಕಾಯಿದೆಯನ್ನು ಕಾಯುವ ಲೇವಿಯರಿಗೆ ಕೊಡಬೇಕು ಅಂದನು.

Cross references

ಅಂಕೆಗಳ ಪುಸ್ತಕ 1:53

ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್‌ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್‌ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.

ಅಂಕೆಗಳ ಪುಸ್ತಕ 3:7

ಅವರು ಅವನ ಅಪ್ಪಣೆ ಯನ್ನೂ ಸಮಸ್ತ ಸಭೆಯ ಅಪ್ಪಣೆಯನ್ನೂ ಸಮಸ್ತ ಗುಡಾರದ ಮುಂದೆ ಕಾಪಾಡಲಿ, ಮತ್ತು ಗುಡಾರದ ಸೇವೆಯನ್ನು ಮಾಡಲಿ.

ಅಂಕೆಗಳ ಪುಸ್ತಕ 3:25

ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ

ಅಂಕೆಗಳ ಪುಸ್ತಕ 3:31

ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ.

ಅಂಕೆಗಳ ಪುಸ್ತಕ 3:36

ಇದಲ್ಲದೆ ಮೆರಾರೀಯ ಕುಮಾ ರರ ಅಪ್ಪಣೆಯೂ ಅವರ ವಶದಲ್ಲಿ ಇರುವವುಗಳೂ ಯಾವವೆಂದರೆ: ಗುಡಾರದ ಹಲಗೆಗಳೂ ಅಗುಳಿಗಳೂ ಕಂಬಗಳೂ ಕುಣಿಕೆಗಳೂ ಎಲ್ಲಾ ವಸ್ತುಗಳೂ ಅವರ ಎಲ್ಲಾ ಸೇವೆಯೂ

ಅಂಕೆಗಳ ಪುಸ್ತಕ 8:26

ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.

ಅಂಕೆಗಳ ಪುಸ್ತಕ 18:1

ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು.

ಅಂಕೆಗಳ ಪುಸ್ತಕ 18:23

ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು.

ಅಂಕೆಗಳ ಪುಸ್ತಕ 31:28

ಮನುಷ್ಯರಿಂದಲೂ ಪಶುಗಳಿಂದಲೂ ಕತ್ತೆಗಳಿಂದಲೂ ಕುರಿಗಳಿಂದಲೂ ಐನೂರರಲ್ಲಿ ಒಂದು ಪ್ರಾಣವನ್ನು ಯುದ್ಧಕ್ಕೆ ಹೊರಟ ಯುದ್ಧಸ್ಥರ ಕಡೆಯಿಂದ ಕರ್ತನಿಗೆ ಕಪ್ಪವಾಗಿ ಎತ್ತಬೇಕು

ಯೆಹೋಶುವ 9:27

ಈ ವರೆಗೂ ಇರುವ ಹಾಗೆಯೇ ಅವರನ್ನು ಆ ದಿನದಲ್ಲಿ ಸಭೆಗೂ ಕರ್ತನು ಆದು ಕೊಳ್ಳುವ ಸ್ಥಳದಲ್ಲಿರುವ ಆತನ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಮಾಡಿದನು.

1 ದಿನವೃತ್ತಾಂತ 9:27

ಈ ಅಪ್ಪಣೆಯು ಅವರದಾಗಿದದ್ದರಿಂದಲೂ ಪ್ರತಿ ಉದಯದಲ್ಲಿ ತೆರೆಯುವದು ಅವರದಾಗಿದದ್ದ ರಿಂದಲೂ ಅವರು ದೇವರ ಮನೆಯ ಸುತ್ತಲೂ ವಾಸ ವಾಗಿದ್ದರು.

1 ದಿನವೃತ್ತಾಂತ 23:32

ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.

1 ದಿನವೃತ್ತಾಂತ 26:20

ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು.

2 ದಿನವೃತ್ತಾಂತ 14:15

ಪಶುಗಳಿದ್ದ ಡೇರೆಗಳನ್ನು ಹೊಡೆದು ಕುರಿಗಳನ್ನೂ ಒಂಟೆಗಳನ್ನೂ ಬಹಳವಾಗಿ ತೆಗೆದುಕೊಂಡು ಯೆರೂ ಸಲೇಮಿಗೆ ತಿರುಗಿದರು.

ಅಪೋಸ್ತಲರ ಕೃತ್ಯಗಳು 20:28

ದೇವರು ತನ್ನ ಸ್ವರಕ್ತದಿಂದ ಕೊಂಡುಕೊಂಡ ಸಭೆಯನ್ನು ಪೋಷಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.

1 ಕೊರಿಂಥದವರಿಗೆ 4:2

ಹೀಗಿರಲು ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಾಗಿದೆ.

1 ಕೊರಿಂಥದವರಿಗೆ 9:13

ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ?

ಕೊಲೊಸ್ಸೆಯವರಿಗೆ 4:17

ಅರ್ಖಿಪ್ಪನಿಗೆ--ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.ಇದು ಪೌಲನೆಂಬ ನಾನು ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.

ಹೆಬ್ರಿಯರಿಗೆ 13:17

ನಿಮ್ಮ ನಾಯಕರಿಗೆ ವಿಧೇಯರಾಗಿದ್ದು ಅವರಿಗೆ ಅಧೀನರಾಗಿರ್ರಿ. ಯಾಕಂದರೆ ಅವರು ಲೆಕ್ಕ ಒಪ್ಪಿಸಬೇಕಾ ದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವವರಾಗಲಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.

Interlinear

Choose Theme