Home Bibles ☰ Books 1 ದಿನವೃತ್ತಾಂತ 26:22 · ಕನ್ನಡ ಬೈಬಲ್
1 ದಿನವೃತ್ತಾಂತ 26:22 · ಕನ್ನಡ ಬೈಬಲ್

ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು.

Cross references

1 ದಿನವೃತ್ತಾಂತ 23:8

ಮುಖ್ಯಸ್ಥರಾದ ಯೆಹೀಯೇಲನು ಜೇತಾಮನು ಯೋವೇಲನು ಎಂಬ ಮೂರು ಮಂದಿಯು.

1 ದಿನವೃತ್ತಾಂತ 26:20

ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಮನೆಯ ಬೊಕ್ಕಸದ ಮೇಲೆಯೂ ಪ್ರತಿಷ್ಠಿತವಾದ ವುಗಳ ಬೊಕ್ಕಸದ ಮೇಲೆಯೂ ಅಧಿಕಾರಿಯಾ ಗಿದ್ದನು.

1 ದಿನವೃತ್ತಾಂತ 29:8

ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು.

ನೆಹೆಮ್ಯ 10:38

ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್‌ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.

Interlinear

Choose Theme