ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
Cross references
ನಿನ್ನ ಭೂಮಿಯ ಪ್ರಥಮ ಫಲಗಳಲ್ಲಿ ಮೊದಲ ನೆಯದನ್ನು ನಿನ್ನ ದೇವರಾದ ಕರ್ತನ ಆಲಯಕ್ಕೆ ತರ ಬೇಕು. ಮೇಕೆಯ ಮರಿಯನ್ನು ತಾಯಿಯ ಹಾಲಿನಲ್ಲಿ ಬೇಯಿಸಬಾರದು.
ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.
ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.