Home Bibles ನೆಹೆಮ್ಯ 10:38 · ಕನ್ನಡ ಬೈಬಲ್
ನೆಹೆಮ್ಯ 10:38 · ಕನ್ನಡ ಬೈಬಲ್

ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು.ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್‌ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು.

Cross references

ಲೇವ್ಯಕಾಂಡ 27:30

ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು.

ಅಂಕೆಗಳ ಪುಸ್ತಕ 15:19

ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು.

ಅಂಕೆಗಳ ಪುಸ್ತಕ 15:21

ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.

ಅಂಕೆಗಳ ಪುಸ್ತಕ 18:21

ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ.

ಅಂಕೆಗಳ ಪುಸ್ತಕ 18:24

ಇಸ್ರಾಯೇಲ್‌ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು.

ಅಂಕೆಗಳ ಪುಸ್ತಕ 18:26

ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್‌ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.

ದ್ವಿತೀಯೋಪದೇಶಕಾಂಡ 14:22

ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು.

1 ದಿನವೃತ್ತಾಂತ 9:26

ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು.

2 ದಿನವೃತ್ತಾಂತ 31:11

ಆಗ ಹಿಜ್ಕೀಯನು ಕರ್ತನ ಮನೆಯಲ್ಲಿ ಉಗ್ರಾಣಗಳನ್ನು ಸಿದ್ಧಮಾಡಲು ಹೇಳಿದನು.

ನೆಹೆಮ್ಯ 13:12

ಆಗ ಯೆಹೂದದವರೆಲ್ಲರು ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ, ಇವುಗಳಲ್ಲಿ ಹತ್ತರಲೊಂದು ಪಾಲು ಕೊಠಡಿ ಗಳಲ್ಲಿ ತಂದರು.

ನೆಹೆಮ್ಯ 13:31

ವರ್ಗಗಳನ್ನೂ ಅರ್ಪಣೆಯ ಕಟ್ಟಿಗೆಗಳಿಗೋಸ್ಕರವೂ ಪ್ರಥಮ ಫಲಗಳಿಗೋಸ್ಕರವೂ ದೃಢವಾದ ಕಾಲ ಗಳನ್ನೂ ನೇಮಿಸಿದೆನು. ನನ್ನ ದೇವರೇ, ಒಳ್ಳೇದಕ್ಕಾಗಿ ನನ್ನನ್ನು ಜ್ಞಾಪಕಮಾಡು.

Interlinear

Choose Theme