ಅದು ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೆ ನಿತ್ಯ ಕಟ್ಟಳೆಯಾಗಿರತಕ್ಕದ್ದು. ಯಾಕಂದರೆ ಅದು ಎತ್ತುವ ಅರ್ಪಣೆಯಾಗಿದೆ. ಇಸ್ರಾಯೇಲ್ ಮಕ್ಕಳಿಂದ ಎತ್ತುವ ಅರ್ಪಣೆಯೂ ಅವರ ಸಮಾ ಧಾನದ ಬಲಿಗಳ ಅರ್ಪಣೆಗಳಿಂದ ಅವರು ಕರ್ತನಿಗೆ ಎತ್ತುವ ಅರ್ಪಣೆಯೂ ಆಗಿರಬೇಕು.
Cross references
ನಿನ್ನ ಸಹೋದರನಾದ ಆರೋನನ ಗೌರವ ಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು.
ನೀನು ಟಗರಿನ ಎದೆಯ ಭಾಗದ ಆಡಿಸುವ ಅರ್ಪಣೆಯನ್ನು ಎತ್ತಿದ ಬಲದ ಮುಂದೊ ಡೆಯನ್ನು ಆರೋನನ ಮತ್ತು ಅವನ ಕುಮಾರರ ಪ್ರತಿಷ್ಠೆಗಾಗಿ ಎತ್ತಿದ್ದನ್ನೂ ಪರಿಶುದ್ಧ ಮಾಡು.
ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.
ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ:
ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ.
ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ.
ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು.
ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು.
ಯಾಜಕನು ಅವುಗಳನ್ನು ಆಡಿಸುವ ಅರ್ಪಣೆಗಾಗಿ ಕರ್ತನ ಎದುರಿ ನಲ್ಲಿ ಆಡಿಸಬೇಕು. ಆಡಿಸುವ ಎದೆಯ ಸಂಗಡಲೂ ಎತ್ತುವ ಮುಂದೊಡೆಯ ಸಂಗಡಲೂ ಅದು ಯಾಜಕ ನಿಗೆ ಪರಿಶುದ್ಧವಾಗಿದೆ. ಆ ಮೇಲೆ ನಾಜೀರನು ದ್ರಾಕ್ಷಾ ರಸವನ್ನು ಕುಡಿಯಬಹುದು.
ಆ ದೇಶದ ರೊಟ್ಟಿಯನ್ನು ತಿನ್ನುವಾಗ ನೀವು ಕರ್ತನಿಗೆ ಎತ್ತುವ ಅರ್ಪಣೆಯನ್ನು ಅರ್ಪಿಸಬೇಕು.
ನಿಮ್ಮ ಸಂತತಿಗಳ ವರೆಗೂ ನಿಮ್ಮ ಹಿಟ್ಟಿನ ಪ್ರಥಮವಾದದ್ದನ್ನು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ.
ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು.
ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.
ಅವರ ಅರ್ಧ ಪಾಲಿನಿಂದ ಅದನ್ನು ತಕ್ಕೊಂಡು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಯಾಜಕನಾದ ಎಲ್ಲಾಜಾರನಿಗೆ ಕೊಡ ಬೇಕು.
ಆದರೆ ಮೋಶೆಯು ಕರ್ತನಿಗೆ ಎತ್ತುವ ಅರ್ಪಣೆಯಾಗಿರುವ ಕಪ್ಪವನ್ನು ಯಾಜಕನಾದ ಎಲ್ಲಾಜಾರನಿಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಕೊಟ್ಟನು.
ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು.