ಮತ್ತಾಯ 27:44 · ಕನ್ನಡ ಬೈಬಲ್
ಆತನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಆತನನ್ನು ನಿಂದಿಸಿದರು.
Cross references
ಯೋಬ 30:7
ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ.
ಕೀರ್ತನೆಗಳು 35:15
ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
ಮತ್ತಾಯ 27:38
ಅಲ್ಲಿ ಒಬ್ಬನನ್ನು ಬಲಗಡೆಯಲ್ಲಿಯೂ ಮತ್ತೊಬ್ಬನನ್ನು ಎಡಗಡೆಯ ಲ್ಲಿಯೂ ಇಬ್ಬರು ಕಳ್ಳರನ್ನು ಆತನೊಂದಿಗೆ ಶಿಲುಬೆಗೆ ಹಾಕಿದರು.
ಮಾರ್ಕ 15:32
ಇಸ್ರಾಯೇ ಲ್ಯರ ಅರಸನಾದ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ನೋಡಿ ನಂಬುವೆವು ಎಂದು ತಮ್ಮಲ್ಲಿ ಅಂದುಕೊಂಡರು; ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರೂ ಆತನನ್ನು ದೂಷಿಸಿದರು.
ಲೂಕ 23:39
ತೂಗುಹಾಕಲ್ಪಟ್ಟಿದ್ದ ದುಷ್ಕರ್ಮಿಗಳಲ್ಲಿ ಒಬ್ಬನು ಆತನನ್ನು ದೂಷಿಸಿ--ನೀನು ಕ್ರಿಸ್ತನಾಗಿದ್ದರೆ ನಿನ್ನನ್ನು ರಕ್ಷಿಸಿಕೊಂಡು ನಮ್ಮನ್ನೂ ರಕ್ಷಿಸು ಅಂದನು.