ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
Cross references
ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು
ನನ್ನನ್ನು ಹಗೆಮಾಡುವವನ ನಾಶಕ್ಕೆ ನಾನು ಸಂತೋಷಪಟ್ಟು, ಅವನನ್ನು ಕೇಡು ಕಂಡು ಹಿಡಿಯಿ ತೆಂದು ಗರ್ವಪಟ್ಟರೆ,
ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
ನಾಶನವು ಅವನಿಗೆ ತಿಳಿಯದೆ ಬರಲಿ; ಅವನು ಅಡಗಿಸಿಟ್ಟ ಬಲೆಯು ಅವನನ್ನೇ ಹಿಡಿಯಲಿ; ಅಂಥಾ ನಾಶನಕ್ಕಾಗಿ ಅವನು ಅದರಲ್ಲಿಯೇ ಬೀಳಲಿ,
ಅವರು ತಮ್ಮ ಹೃದಯ ದಲ್ಲಿ--ಹಾ, ನಮ್ಮ ಇಷ್ಟವೇ ನೆರವೇರಿತು ಎಂದು ಹೇಳದಿರಲಿ. ಅವನನ್ನು ನುಂಗಿ ಬಿಟ್ಟೆವೆಂದೂ ಅವರು ಹೇಳದೆ ಇರಲಿ;
ನಾನು ಕೆಡಲ್ಪಡುವ ಸ್ಥಿತಿಯಲ್ಲಿದ್ದೇನೆ; ನನ್ನ ವ್ಯಸನವು ಯಾವಾಗಲೂ ನನ್ನ ಮುಂದೆ ಅದೆ.
ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.
ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.
ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು.
ನಿನ್ನ ಶತ್ರು ಬಿದ್ದರೆ ಸಂತೋಷಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ;
ಅವನ ಪ್ರಾಣವು ಅವನಿಗೆ ಕೊಳ್ಳೆಯಾಗಿರುವದು. ನಾನು ಒಳ್ಳೇದಕ್ಕಲ್ಲ ಕೆಟ್ಟದ್ದಕ್ಕೆ ಈ ಪಟ್ಟಣದ ಮೇಲೆ ನನ್ನ ದೃಷ್ಟಿಯನ್ನಿಟ್ಟಿದ್ದೇನೆಂದು ಕರ್ತನು ಹೇಳುತ್ತಾನೆ; ಅದು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದು; ಅವನು ಅದನ್ನು ಬೆಂಕಿ ಯಿಂದ ಸುಟ್ಟುಬಿಡುವನು.
ತರುವಾಯ ಅಧಿಪತಿಯ ಸೈನಿಕರು ಯೇಸುವನ್ನು ಸಾಮಾನ್ಯವಾದ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ಪೂರ್ಣ ತಂಡವನ್ನು ಆತನ ಮುಂದೆ ಕೂಡಿಸಿದರು.
ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ--
ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
ನಂಬದಿರುವ ಯೆಹೂ ದ್ಯರು ಹೊಟ್ಟೇಕಿಚ್ಚುಪಟ್ಟು ನೀಚರಾದ ಕೆಲವು ದುಷ್ಟ ರನ್ನು ಕರೆದುಕೊಂಡು ಬಂದು ಗುಂಪು ಕೂಡಿಸಿಕೊಂಡು ಪಟ್ಟಣದಲ್ಲೆಲ್ಲಾ ಗದ್ದಲವನ್ನೆಬ್ಬಿಸಿ ಪೌಲ ಸೀಲರನ್ನು ಜನರೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು.
ಅನ್ಯಾಯದಲ್ಲಿ ಸಂತೋಷಪಡದೆ ಸತ್ಯದಲ್ಲಿಯೇ ಸಂತೋಷಪಡುತ್ತದೆ.