ಆಗ ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.
Cross references
ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ ಗೋಣೀತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು.
ದೇವರಾದ ಕರ್ತನು ಹೇಳುತ್ತಾನೆ--ಆ ದಿನದಲ್ಲಿ ಆಗುವದೇನಂದರೆ, ನಾನು ಸೂರ್ಯನನ್ನು ಮಧ್ಯಾಹ್ನದಲ್ಲಿ ಮುಳುಗುವಂತೆ ಮಾಡುತ್ತೇನೆ. ಭೂಮಿಯನ್ನು ಹಗಲಲ್ಲೇ ಕತ್ತಲಾಗುವಂತೆ ಮಾಡು ತ್ತೇನೆ.
ಆತನನ್ನು ಶಿಲುಬೆಗೆ ಹಾಕಿದಾಗ ಮೂರನೆಯ ತಾಸಾಗಿತ್ತು.
ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.
ಆಗ ಸುಮಾರು ಆರನೇತಾಸಾಗಿತ್ತು; ಒಂಭತ್ತನೇ ತಾಸಿನವರೆಗೆ ಭೂಮಿಯ ಮೇಲೆಲ್ಲಾ ಕತ್ತಲೆ ಕವಿಯಿತು.
ನಾಲ್ಕನೆಯ ದೂತನು ಊದಿದಾಗ ಸೂರ್ಯನ ಮೂರರಲ್ಲಿ ಒಂದು ಭಾಗವೂ ಚಂದ್ರನ ಮೂರರಲ್ಲಿ ಒಂದು ಭಾಗವೂ ನಕ್ಷತ್ರಗಳ ಮೂರರಲ್ಲಿ ಒಂದು ಭಾಗವೂ ಒಡೆಯಲ್ಪಟ್ಟದ್ದರಿಂದ ಮೂರನೇ ಭಾಗವು ಕತ್ತಲಾಯಿತು; ಹಗಲಿನೊಳಗೆ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಇತ್ತು; ರಾತ್ರಿಯು ಹಾಗೆಯೇ ಆಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
ಅವನು ಆ ತಳವಿಲ್ಲದ ತಗ್ಗನ್ನು ತೆರೆದಾಗ ಅಲ್ಲಿಂದ ದೊಡ್ಡ ಕುಲುಮೆಯ ಹೊಗೆಯಂತೆ ಆ ತಗ್ಗಿನೊಳಗಿಂದ ಹೊಗೆಯು ಏರಿತು; ಆ ತಗ್ಗಿನ ಹೊಗೆಯ ದೆಸೆಯಿಂದ ಸೂರ್ಯನು ವಾಯು ಮಂಡಲವು ಕತ್ತಲಾದವು.