ಮತ್ತು ಆತನು ಪರಲೋಕದ ಕಡೆಗೆ ನೋಡುತ್ತಾ ನಿಟ್ಟುಸಿರುಬಿಟ್ಟು ಅವನಿಗೆ--ಎಪ್ಫಥಾ ಅಂದನು. ಅಂದರೆ ತೆರೆಯಲ್ಪಡಲಿ ಎಂದರ್ಥ.
Cross references
ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
ಆದದರಿಂದ ಮನುಷ್ಯಪುತ್ರನೇ, ನಿನ್ನ ನಡು ಮುರಿದಂತೆ ನಿಟ್ಟುಸಿರಿಡು, ಕಹಿಯಾದ ಮನಸ್ಸಿ ನಿಂದ ಅವರ ಕಣ್ಣುಗಳ ಮುಂದೆಯೇ ನಿಟ್ಟುಸಿರಿಡು.
ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು.
ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.
ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು.
ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
ಒಂಭತ್ತ ನೆಯ ತಾಸಿನಲ್ಲಿ ಯೇಸು--ಎಲೋಹಿ, ಎಲೋಹಿ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು.
ಆತನು ಬಂದು ಪೆಟ್ಟಿಗೆಯನ್ನು ಮುಟ್ಟಿದಾಗ ಅದನ್ನು ಹೊತ್ತುಕೊಂಡಿದ್ದವರು ಕದಲದೆ ನಿಂತರು; ಆಗ ಆತನು--ಯೌವನಸ್ಥನೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
ಆಗ ಯೇಸು ಅವನಿಗೆ-- ನೀನು ದೃಷ್ಟಿ ಹೊಂದಿದವನಾಗು; ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ ಅಂದನು.ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.
ತರುವಾಯ ಆತನು ಸವಿಾಪಿಸಿದಾಗ ಪಟ್ಟಣ ವನ್ನು ನೋಡಿ ಅದರ ವಿಷಯವಾಗಿ ಅತ್ತು--
ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ--
ಯೇಸು ಅತ್ತನು.
ಆದದರಿಂದ ಯೇಸು ತಿರಿಗಿ ತನ್ನಲ್ಲಿ ಮೂಲ್ಗುತ್ತಾ ಸಮಾಧಿಗೆ ಬಂದನು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಮೇಲೆ ಇಟ್ಟಿತ್ತು.
ಆಗ ಅವರು ಸತ್ತವನನ್ನು ಇಟ್ಟಿದ್ದ ಸ್ಥಳದಿಂದ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ--ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಾನು ನಿನ್ನನ್ನು ಕೊಂಡಾಡುತ್ತೇನೆ.
ಆತನು ಹೀಗೆ ಮಾತನಾಡಿದ ಮೇಲೆ--ಲಾಜರನೇ, ಹೊರಗೆ ಬಾ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
ಯೇಸು ಈ ಮಾತುಗಳನ್ನು ಹೇಳಿ ಪರಲೋಕದ ಕಡೆಗೆ ಕಣ್ಣುಗಳನ್ನೆತ್ತಿ-- ತಂದೆಯೇ, ಈಗ ಗಳಿಗೆ ಬಂದಿದೆ; ನಿನ್ನ ಮಗನನ್ನು ಮಹಿಮೆಪಡಿಸು; ಆಗ ನಿನ್ನ ಮಗನೂ ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು.
ಪೇತ್ರನು ಅವನಿಗೆ--ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡು ತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ಹಾಸಿಕೋ ಎಂದು ಹೇಳಿದನು; ಕೂಡಲೆ ಅವನು ಎದ್ದನು.
ಪೇತ್ರನು ಅವರೆ ಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆ ಮಾಡಿ ಶವದ ಕಡೆಗೆ ತಿರುಗಿಕೊಂಡು--ತಬಿಥಾ, ಏಳು ಅಂದನು; ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು.
ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.