Home Bibles ಯೆಹೆಜ್ಕೇಲ 21:6 · ಕನ್ನಡ ಬೈಬಲ್
ಯೆಹೆಜ್ಕೇಲ 21:6 · ಕನ್ನಡ ಬೈಬಲ್

ಆದದರಿಂದ ಮನುಷ್ಯಪುತ್ರನೇ, ನಿನ್ನ ನಡು ಮುರಿದಂತೆ ನಿಟ್ಟುಸಿರಿಡು, ಕಹಿಯಾದ ಮನಸ್ಸಿ ನಿಂದ ಅವರ ಕಣ್ಣುಗಳ ಮುಂದೆಯೇ ನಿಟ್ಟುಸಿರಿಡು.

Cross references

ಯೆಶಾಯ 16:11

ಆದದರಿಂದ ಮೋವಾಬಿನ ನಿಮಿತ್ತ ನನ್ನ ಕರುಳುಗಳು ಮತ್ತು ಕೀರ್‌ ಹರೇಷೆಥಿನ ನಿಮಿತ್ತ ನನ್ನ ಅಂತರಿಂದ್ರಿಯಗಳು ಕಿನ್ನರಿಯಂತೆ ಸ್ವರಗೈಯುವವು.

ಯೆಶಾಯ 21:3

ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.

ಯೆಶಾಯ 22:4

ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.

ಯೆರೆಮಿಯ 4:19

ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.

ಯೆರೆಮಿಯ 9:17

ಕೋಟೆಯಲ್ಲಿ ವಾಸವಾಗಿರುವವನೇ, ದೇಶದೊಳ ಗಿಂದ ನಿನ್ನ ಸರಕುಗಳನ್ನು ಕೂಡಿಸು.

ಯೆರೆಮಿಯ 19:10

ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.

ಯೆರೆಮಿಯ 30:6

ಒಂದು ದಿನವದೆ; ಆಗ ಎಫ್ರಾಯಾಮಿನ ಪರ್ವತದಲ್ಲಿ ಕಾಯುವವರು--ಏಳಿರಿ, ಚೀಯೋನಿಗೆ, ನಮ್ಮ ದೇವರಾದ ಕರ್ತನ ಬಳಿಗೆ ಹೋಗೋಣ ಎಂದು ಕೂಗುವರು.

ಯೆಹೆಜ್ಕೇಲ 4:12

ಇದಲ್ಲದೆ ನೀನು ಆಹಾರವನ್ನು ಬಾರ್ಲಿಯ ರೊಟ್ಟಿಗಳಂತೆ ತಿನ್ನಬೇಕು; ಮತ್ತು ಅದನ್ನು ಮನುಷ್ಯನೊಳಗಿಂದ ಬರುವ ಮಲದಿಂದ ಅವರ ಕಣ್ಣುಗಳ ಮುಂದೆ ಅಡಿಗೆಮಾಡಬೇಕು;

ಯೆಹೆಜ್ಕೇಲ 6:11

ದೇವರಾದ ಕರ್ತನು ಹೇಳುವದೇನಂದರೆ; ನಿನ್ನ ಕೈಯಿಂದ ಬಡಿದು ನಿನ್ನ ಪಾದದಿಂದ ತುಳಿದು ಹೇಳ ಬೇಕಾದದ್ದೇನಂದರೆ--ಮನೆಯವರ ಸಮಸ್ತ ಕೆಟ್ಟ ಅಸಹ್ಯಗಳೇ ಅಯ್ಯೋ, ಅವರು ಕತ್ತಿಯಿಂದಲೂ ಬರ ದಿಂದಲೂ ಮತ್ತು ವ್ಯಾಧಿಗಳಿಂದಲೂ ಬೀಳುವರು.

ಯೆಹೆಜ್ಕೇಲ 9:4

ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು.

ಯೆಹೆಜ್ಕೇಲ 12:3

ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು.

ಯೆಹೆಜ್ಕೇಲ 21:12

ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ.

ಯೆಹೆಜ್ಕೇಲ 37:20

ನೀನು ಬರೆದ ಆ ಕೋಲುಗಳನ್ನು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿರುವವು.

ದಾನಿಯೇಲ 5:6

ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.

ದಾನಿಯೇಲ 8:27

ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.

ನಹೂಮ 2:10

ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.

ಹಬಕ್ಕೂಕ 3:16

ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು.

ಯೋಹಾನ 11:33

ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ--

Interlinear

Choose Theme