Home Bibles ☰ Books ಹೆಬ್ರಿಯರಿಗೆ 4:15 · ಕನ್ನಡ ಬೈಬಲ್
ಹೆಬ್ರಿಯರಿಗೆ 4:15 · ಕನ್ನಡ ಬೈಬಲ್

ಯಾಕಂದರೆ ನಮಗಿ ರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾ ಸಿಂಹಾಸನದ ಬಳಿಗೆ ಬರೋಣ.

Cross references

ನಿರ್ಗಮಕಾಂಡ 23:9

ಪರದೇಶಸ್ಥನನ್ನು ಉಪದ್ರವ ಪಡಿಸಬೇಡ; ಪರ ದೇಶಸ್ಥನ ಹೃದಯವನ್ನು ನೀವು ತಿಳಿದಿರುವಿರಿ. ನೀವೂ ಐಗುಪ್ತದೇಶದಲ್ಲಿ ಪರದೇಶಿಗಳಾಗಿದ್ದೀರಷ್ಟೆ.

ಯೆಶಾಯ 53:4

ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು.

ಯೆಶಾಯ 53:9

ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ.

ಹೊಶೇಯ 11:8

ಎಫ್ರಾಯಾಮೇ, ನಾನು ನಿನ್ನನ್ನು ಬಿಟ್ಟು ಬಿಡುವದು ಹೇಗೆ? ಇಸ್ರಾಯೇಲೇ, ನಿನ್ನನ್ನು ನಾನು ಬಿಡಿಸುವದು ಹೇಗೆ? ನಾನು ನಿನ್ನನ್ನು ಅದ್ಮದ ಹಾಗೆ ಮಾಡುವದು ಹೇಗೆ? ನಾನು ನಿನ್ನನ್ನು ಜೆಬೋಯಾಮಿನ ಹಾಗೆ ಸ್ಥಾಪಿಸುವದು ಹೇಗೆ? ನನ್ನ ಹೃದಯವು ನನ್ನಲ್ಲಿ ತಿರುಗಿಕೊಂಡಿದೆ. ನನ್ನ ಪಶ್ಚಾತ್ತಾಪಗಳು ಒಟ್ಟಿಗೆ ಹತ್ತಿ ಕೊಂಡಿವೆ.

ಮತ್ತಾಯ 8:16

ಸಾಯಂಕಾಲವಾದಾಗ ದೆವ್ವಗಳು ಹಿಡಿದಿದ್ದ ಬಹಳ ಜನರನ್ನು ಅವರು ಆತನ ಬಳಿಗೆ ತಂದರು; ಮತ್ತು ಆತನು ತನ್ನ ಮಾತಿನಿಂದ ದೆವ್ವಗಳನ್ನು ಬಿಡಿಸಿ ದ್ದಲ್ಲದೆ ಅಸ್ವಸ್ಥವಾಗಿದ್ದವರೆಲ್ಲರನ್ನೂ ಸ್ವಸ್ಥ ಮಾಡಿದನು.

ಮತ್ತಾಯ 12:20

ಆತನು ನ್ಯಾಯವನ್ನು ವಿಜಯಕ್ಕಾಗಿ ಕಳುಹಿಸುವವರೆಗೆ ಜಜ್ಜಿದ ದಂಟನ್ನು ಮುರಿಯುವದಿಲ್ಲ ಮತ್ತು ಹೊಗೆಯಾಡುವ ಬತ್ತಿಯನ್ನು ನಂದಿಸುವದಿಲ್ಲ.

ಲೂಕ 4:2

ನಾಲ್ವತ್ತು ದಿನಗಳು ಸೈತಾನನಿಂದ ಶೋಧಿಸಲ್ಪಡುತ್ತಿದ್ದನು. ಆ ದಿನಗಳಲ್ಲಿ ಆತನು ಏನೂ ತಿನ್ನಲಿಲ್ಲ. ಅವು ಮುಗಿದ ಮೇಲೆ ಆತನು ಹಸಿದನು.

ಲೂಕ 22:28

ಇದಲ್ಲದೆ ನನ್ನ ಸಂಗಡ ನನ್ನ ಕಷ್ಟಗಳಲ್ಲಿ ಎಡೆಬಿಡದೆ ಇದ್ದವರು ನೀವೇ.

ಯೋಹಾನ 8:46

ನನ್ನಲ್ಲಿ ಪಾಪವಿದೆ ಎಂದು ನಿಮ್ಮಲ್ಲಿ ಯಾರು ಸ್ಥಾಪಿಸುವಿರಿ? ಮತ್ತು ನಾನು ಸತ್ಯವನ್ನು ಹೇಳಿದರೆ ನೀವು ನನ್ನನ್ನು ಯಾಕೆ ನಂಬುವದಿಲ್ಲ?

2 ಕೊರಿಂಥದವರಿಗೆ 5:21

ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.

ಫಿಲಿಪ್ಪಿಯವರಿಗೆ 2:7

ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು.

ಹೆಬ್ರಿಯರಿಗೆ 2:17

ಆದದರಿಂದ ಆತನು ಎಲ್ಲವುಗಳಲ್ಲಿ ತನ್ನ ಸಹೋದರರಿಗೆ ಸಮಾನ ವಾಗಿ ಮಾಡಲ್ಪಟ್ಟನು. ಹೀಗೆ ಆತನು ಜನರ ಪಾಪಗಳಿ ಗೋಸ್ಕರ ಶಾಂತಿ ಮಾಡುವದಕ್ಕೆ ದೇವರ ಕಾರ್ಯ ಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು.ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.

ಹೆಬ್ರಿಯರಿಗೆ 4:14

ಆಕಾಶಗಳನ್ನು ದಾಟಿಹೋದ ದೇವಕುಮಾರ ನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಅರಿಕೆಯನ್ನು ಬಿಗಿಯಾಗಿ ಹಿಡಿಯೋಣ.

Interlinear

Choose Theme