Home Bibles ಮಾರ್ಕ 6:51 · ಕನ್ನಡ ಬೈಬಲ್
ಮಾರ್ಕ 6:51 · ಕನ್ನಡ ಬೈಬಲ್

ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದನು; ಆಗ ಗಾಳಿಯು ನಿಂತಿತು; ಅವರು ಅತ್ಯಧಿಕವಾಗಿ ತಮ್ಮೊಳಗೆ ದಿಗ್ಭ್ರಮೆಯುಳ್ಳವರಾಗಿ ಆಶ್ಚರ್ಯಪಟ್ಟರು.

Cross references

ಕೀರ್ತನೆಗಳು 93:3

ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.

ಕೀರ್ತನೆಗಳು 107:28

ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ

ಮತ್ತಾಯ 8:26

ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.

ಮತ್ತಾಯ 14:28

ಆಗ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನೇ ಆಗಿದ್ದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಅಪ್ಪಣೆಕೊಡು ಅಂದನು.

ಮಾರ್ಕ 1:27

ಅದಕ್ಕೆ ಅವರೆಲ್ಲರೂ--ಇದು ಏನಾಗಿರಬಹುದು? ಈ ಹೊಸ ಬೋಧನೆ ಯಾವದು? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು.

ಮಾರ್ಕ 2:12

ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.

ಮಾರ್ಕ 4:39

ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.

ಮಾರ್ಕ 4:41

ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.

ಮಾರ್ಕ 5:42

ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು.

ಮಾರ್ಕ 6:32

ಆಗ ಅವರು ದೋಣಿ ಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು.

ಮಾರ್ಕ 7:37

ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.

ಲೂಕ 8:24

ಆಗ ಅವರು ಆತನ ಬಳಿಗೆ ಬಂದು ಆತನನ್ನು ಎಬ್ಬಿಸಿ--ಬೋಧ ಕನೇ, ಬೋಧಕನೇ, ನಾವು ನಾಶವಾಗುತ್ತೇವೆ ಅಂದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರನ್ನೂ ಗದರಿಸಿದನು; ಆಗ ಅವು ನಿಂತು ಹೋಗಿ ಅಲ್ಲಿ ಶಾಂತತೆ ಉಂಟಾಯಿತು.

ಯೋಹಾನ 6:21

ಆಗ ಅವರು ಮನಃಪೂರ್ವಕವಾಗಿ ಆತನನ್ನು ದೋಣಿಯಲ್ಲಿ ಸೇರಿಸಿಕೊಂಡರು; ಕೂಡಲೆ ದೋಣಿಯು ಅವರು ಹೋಗುವದಕ್ಕಿದ್ದ ದಡಕ್ಕೆ ಸೇರಿತು.

Interlinear

Choose Theme