Home Bibles ಮಾರ್ಕ 4:39 · ಕನ್ನಡ ಬೈಬಲ್
ಮಾರ್ಕ 4:39 · ಕನ್ನಡ ಬೈಬಲ್

ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.

Cross references

ನಿರ್ಗಮಕಾಂಡ 14:16

ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.

ನಿರ್ಗಮಕಾಂಡ 14:22

ಹೀಗೆ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.

ನಿರ್ಗಮಕಾಂಡ 14:28

ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.

ಯೋಬ 38:11

ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು.

ಕೀರ್ತನೆಗಳು 29:10

ಕರ್ತನು ಪ್ರಳಯದ ಮೇಲೆ ಕೂತುಕೊಳ್ಳುತ್ತಾನೆ; ಹೌದು, ಯುಗಯುಗಕ್ಕೂ ಕರ್ತನು ಅರಸನಾಗಿ ಕೂತು ಕೊಂಡಿದ್ದಾನೆ.ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು.

ಕೀರ್ತನೆಗಳು 65:7

ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,

ಕೀರ್ತನೆಗಳು 89:9

ನೀನು ಸಮುದ್ರದ ಉಬ್ಬರವನ್ನು ಆಳುತ್ತೀ; ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀ.

ಕೀರ್ತನೆಗಳು 93:3

ಕರ್ತನೇ, ಪ್ರವಾಹಗಳು ಎತ್ತಲ್ಪಟ್ಟಿವೆ; ಪ್ರವಾಹಗಳು ತಮ್ಮ ಶಬ್ದವನ್ನು ಎತ್ತಿವೆ; ಪ್ರವಾಹ ಗಳು ತಮ್ಮ ತೆರೆಗಳನ್ನು ಎತ್ತುತ್ತವೆ.

ಕೀರ್ತನೆಗಳು 104:7

ಅವು ನಿನ್ನ ಗದರಿಕೆಯಿಂದ ಓಡಿಹೋದವು; ನಿನ್ನ ಗುಡುಗಿನ ಶಬ್ದದಿಂದ ಅವು ಓಡಿಹೋದವು.

ಕೀರ್ತನೆಗಳು 107:29

ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು.

ಕೀರ್ತನೆಗಳು 148:8

ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ,

ಸಾಮೇತಿಗಳು 8:29

ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು.

ಯೆರೆಮಿಯ 5:22

ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ.

ವಿಲಾಪಗಳು 3:31

ಕರ್ತನು ಎಂದೆಂದಿಗೂ ತಳ್ಳಿಬಿಡುವದಿಲ್ಲ;

ನಹೂಮ 1:4

ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ.

ಮಾರ್ಕ 9:25

ಆಗ ಜನರು ಕೂಡಿಕೊಂಡು ಓಡಿ ಬರುವದನ್ನು ಯೇಸು ನೋಡಿ ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ --ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ; ಇನ್ನೆಂದಿಗೂ ಅವ ನೊಳಗೆ ಸೇರದಿರು ಎಂದು ನಾನು ನಿನಗೆ ಖಂಡಿತವಾಗಿ ಹೇಳುತ್ತೇನೆ ಅಂದನು.

ಲೂಕ 4:39

ಆಗ ಆತನು ಆಕೆಯ ಬಳಿಯಲ್ಲಿ ನಿಂತು ಜ್ವರವನ್ನು ಗದರಿಸಲು ಅದು ಆಕೆಯನ್ನು ಬಿಟ್ಟಿತು; ಕೂಡಲೆ ಆಕೆಯು ಎದ್ದು ಅವರನ್ನು ಉಪಚರಿಸಿದಳು.

Interlinear

Choose Theme