Cross references
ಯೇಸು ಆ ವಿಷಯವನ್ನು ಕೇಳಿದಾಗ ದೋಣಿ ಯನ್ನು ಹತ್ತಿ ಅಲ್ಲಿಂದ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಹೊರಟುಹೋದನು. ಇದನ್ನು ಕೇಳಿ ಜನರು ಪಟ್ಟಣ ಗಳಿಂದ ಕಾಲು ನಡಿಗೆಯಾಗಿ ಆತನನ್ನು ಹಿಂಬಾಲಿ ಸಿದರು.
ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.
ಆತನು ಜನರನ್ನು ಕಳುಹಿಸುವಷ್ಟರಲ್ಲಿ ತನ್ನ ಶಿಷ್ಯರು ಕೂಡಲೆ ದೋಣಿಯನ್ನು ಹತ್ತಿ ಮುಂದಾಗಿ ಆಚೇ ಕಡೆಯ ಬೇತ್ಸಾಯಿದಕ್ಕೆ ಹೋಗುವಂತೆ ಅವರನ್ನು ಬಲವಂತ ಮಾಡಿದನು.
ಜನ ಸಮೂಹವನ್ನು ನಾನು ಕನಿಕರಿಸುತ್ತೇನೆ; ಯಾಕಂದರೆ ಮೂರು ದಿನ ಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಅವರಿಗೆ ಊಟಕ್ಕೇನೂ ಇಲ್ಲ.
ತರುವಾಯ ಅಪೊಸ್ತಲರು ಹಿಂತಿರುಗಿ ಬಂದು ತಾವು ಮಾಡಿದವುಗಳನ್ನೆಲ್ಲಾ ಆತನಿಗೆ ತಿಳಿಸಿದರು. ಆಗ ಆತನು ಬೇತ್ಸಾಯಿದ ಎಂದು ಕರೆಯಲ್ಪಟ್ಟ ಪಟ್ಟಣಕ್ಕೆ ಸಂಬಂಧಿಸಿದ ಅರಣ್ಯಸ್ಥಳಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದನು.
ಜನರ ದೊಡ್ಡ ಗುಂಪು ತನ್ನ ಕಡೆಗೆ ಬರುವದನ್ನು ಯೇಸು ಕಣ್ಣೆತ್ತಿ ನೋಡಿ ಫಿಲಿಪ್ಪ ನಿಗೆ--ಇವರು ಊಟ ಮಾಡುವಂತೆ ನಾವು ರೊಟ್ಟಿ ಯನ್ನು ಎಲ್ಲಿಂದ ಕೊಂಡು ತರೋಣ ಅಂದನು.