Home Bibles ಮಾರ್ಕ 5:36 · ಕನ್ನಡ ಬೈಬಲ್
ಮಾರ್ಕ 5:36 · ಕನ್ನಡ ಬೈಬಲ್

ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.

Cross references

2 ದಿನವೃತ್ತಾಂತ 20:20

ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು.

ಮತ್ತಾಯ 9:28

ಆತನು ಮನೆಯೊಳಕ್ಕೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು; ಆಗ ಯೇಸು ಅವರಿಗೆ--ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ ಎಂದು ಕೇಳಿದಾಗ ಅವರು ಆತನಿಗೆ--ಕರ್ತನೇ, ಹೌದು ಎಂದು ಅಂದರು.

ಮತ್ತಾಯ 17:20

ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ.

ಮಾರ್ಕ 5:34

ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.

ಮಾರ್ಕ 9:23

ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.

ಲೂಕ 8:50

ಆದರೆ ಯೇಸು ಅದನ್ನು ಕೇಳಿ ಪ್ರತ್ಯುತ್ತರವಾಗಿ ಅವನಿಗೆ--ಭಯಪಡ ಬೇಡ, ನಂಬಿಕೆ ಮಾತ್ರ ಇರಲಿ; ಅವಳು ಸ್ವಸ್ಥಳಾಗುವಳು ಎಂದು ಹೇಳಿದನು.

ಯೋಹಾನ 4:48

ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು.

ಯೋಹಾನ 11:40

ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.

ರೋಮಾಪುರದವರಿಗೆ 4:18

ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು.

Interlinear

Choose Theme