ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.
Cross references
ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.
ಆಗ ಏಲಿಯು ಅವಳಿಗೆ ಪ್ರತ್ಯುತ್ತರವಾಗಿ--ಸಮಾಧಾನ ದಿಂದ ಹೋಗು; ಇಸ್ರಾಯೇಲಿನ ದೇವರು, ಆತನಿಂದ ನೀನು ಬೇಡಿಕೊಂಡ ನಿನ್ನ ವಿಜ್ಞಾಪನೆಯನ್ನು ನಿನಗೆ ಕೊಡಲಿ ಅಂದನು.
ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
ಎಲೀಷನು ಅವನಿಗೆ--ಸಮಾ ಧಾನದಿಂದ ಹೋಗು ಅಂದನು. ಆಗ ಅವನನ್ನು ಬಿಟ್ಟು ಸ್ವಲ್ಪ ದೂರವಾಗಿ ಹೋದನು.
ನೀನು ಹೋಗಿ ಸಂತೋಷದಿಂದ ನಿನ್ನ ರೊಟ್ಟಿ ಯನ್ನು ತಿಂದು ಹರ್ಷಹೃದಯದಿಂದ ನಿನ್ನ ದ್ರಾಕ್ಷಾ ರಸವನ್ನು ಕುಡಿ; ದೇವರು ಈಗ ನಿನ್ನ ಕೆಲಸಗಳನ್ನು ಒಪ್ಪಿಕೊಳ್ಳುತ್ತಾನೆ.
ಇಗೋ, ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಆತನ ಬಳಿಗೆ ತಂದರು; ಮತ್ತು ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು.
ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು.
ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.
ಆಗ ಆತನು ಆ ಸ್ತ್ರೀಗೆ--ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿಯದೆ, ಸಮಾಧಾನದಿಂದ ಹೋಗು ಅಂದನು.
ಆಗ ಆತನು ಆಕೆಗೆ--ಮಗಳೇ, ಸಮಾಧಾನ ದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ; ಸ್ವಸ್ಥಳಾಗಿ ಹೋಗು ಅಂದನು.
ಅವನಿಗೆ--ಎದ್ದು ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿಯದೆ ಅಂದನು.
ಆಗ ಯೇಸು ಅವನಿಗೆ-- ನೀನು ದೃಷ್ಟಿ ಹೊಂದಿದವನಾಗು; ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ ಅಂದನು.ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.
ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು;ಪೌಲನು ಅವನನ್ನು ಸ್ಥಿರವಾಗಿ ನೋಡಿ ವಾಸಿಯಾಗು ವದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು--