ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.
Cross references
ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು.
ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--
ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
ಆಗ ಯೇಸು ಅವರೊಂದಿಗೆ ಹೋದನು. ಆತನು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ ಆತನಿಗೆ--ಕರ್ತನೇ, ನಿನ್ನನ್ನು ತೊಂದರೆಪಡಿಸಿ ಕೊಳ್ಳಬೇಡ; ಯಾಕಂದರೆ ನೀನು ನನ್ನ ಮನೆಯಲ್ಲಿ ಪ್ರವೇಶಿಸುವದಕ್ಕೆ ನಾನು ಯೋಗ್ಯನಲ್ಲ.
ಆತನು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿ ರದ ಅಧಿಕಾರಿಯ ಮನೆಯಿಂದ ಒಬ್ಬನು ಬಂದು ಅವನಿಗೆ--ನಿನ್ನ ಮಗಳು ಸತ್ತಿದ್ದಾಳೆ, ಬೋಧಕನಿಗೆ ತೊಂದರೆ ಕೊಡಬೇಡ ಅಂದನು.
ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು.
ಆಗ ಮಾರ್ಥಳು ಯೇಸುವಿಗೆ-- ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯು ತ್ತಿರಲಿಲ್ಲ.
ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
ಆಕೆಯು ಹೀಗೆ ಹೇಳಿದ ಮೇಲೆ ಹೊರಟು ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಗುಪ್ತ ವಾಗಿ ಕರೆದು--ಬೋಧಕನು ಬಂದಿದ್ದಾನೆ, ನಿನ್ನನ್ನು ಕರೆಯುತ್ತಾನೆ ಅಂದಳು.
ತರುವಾಯ ಯೇಸು ಇದ್ದ ಸ್ಥಳಕ್ಕೆ ಮರಿಯಳು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು ಆತನಿಗೆ--ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ ಎಂದು ಹೇಳಿದಳು.
ಯೇಸು--ಆ ಕಲ್ಲನ್ನು ತೆಗೆದುಹಾಕಿರಿ ಅಂದನು. ಅದಕ್ಕೆ ಸತ್ತುಹೋದವನ ಸಹೋದರಿಯಾದ ಮಾರ್ಥಳು ಆತನಿಗೆ--ಕರ್ತನೇ, ಇಷ್ಟರೊಳಗೆ ಅವನು ನಾರುತ್ತಾನೆ; ಯಾಕಂದರೆ ಅವನು ಸತ್ತು ನಾಲ್ಕು ದಿನಗಳಾದವು ಅಂದಳು.