ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
Cross references
ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.
ಒಬ್ಬನು ರೋಗದಲ್ಲಿರುವ ಒಬ್ಬ ಸ್ತ್ರೀಯೊಂದಿಗೆ ಮಲಗಿ ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಿದರೆ ಅವನು ಅವಳ ಬುಗ್ಗೆಯನ್ನು ಬಯಲುಪಡಿಸಿದ್ದಾನೆ; ಅವಳು ತನ್ನ ರಕ್ತದ ಬುಗ್ಗೆಯನ್ನು ಬಯಲುಪಡಿಸಿದ್ದಾಳೆ; ಆದದರಿಂದ ಅವರಿಬ್ಬರೂ ಅವರ ಜನರ ಮಧ್ಯದಿಂದ ತೆಗೆದುಹಾಕಲ್ಪಡಬೇಕು.
ದೇಶದಲ್ಲಿ ಬರವೂ ಉರಿಗಾಳಿಯೂ ಕಾಡಿ ಗೆಯೂ ಬಾಣತಿ ರೋಗವಾದರೂ ಮಿಡಿತೆಯಾದರೂ ಕಂಬಳಿ ಹುಳವಾದರೂ ಅವರ ಶತ್ರುಗಳು ಅವರ ಸ್ವದೇಶದ ಪಟ್ಟಣಗಳಲ್ಲಿ ಅವರನ್ನು ಹಿಂಸಿಸಿದರೂ ಯಾವ ಬಾಧೆ, ಯಾವ ಬೇನೆ ಇದ್ದರೂ
ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು.
ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು.
ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.
ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.
ಅದೇಗಳಿಗೆಯಲ್ಲಿ ರೋಗ ಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಆತನು ಗುಣಪಡಿಸಿದನು; ಕುರುಡರಾದ ಅನೇಕರಿಗೆ ದೃಷ್ಟಿಕೊಟ್ಟನು.