Home Bibles ಲೇವ್ಯಕಾಂಡ 20:18 · ಕನ್ನಡ ಬೈಬಲ್
ಲೇವ್ಯಕಾಂಡ 20:18 · ಕನ್ನಡ ಬೈಬಲ್

ಒಬ್ಬನು ರೋಗದಲ್ಲಿರುವ ಒಬ್ಬ ಸ್ತ್ರೀಯೊಂದಿಗೆ ಮಲಗಿ ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಿದರೆ ಅವನು ಅವಳ ಬುಗ್ಗೆಯನ್ನು ಬಯಲುಪಡಿಸಿದ್ದಾನೆ; ಅವಳು ತನ್ನ ರಕ್ತದ ಬುಗ್ಗೆಯನ್ನು ಬಯಲುಪಡಿಸಿದ್ದಾಳೆ; ಆದದರಿಂದ ಅವರಿಬ್ಬರೂ ಅವರ ಜನರ ಮಧ್ಯದಿಂದ ತೆಗೆದುಹಾಕಲ್ಪಡಬೇಕು.

Cross references

ನಿರ್ಗಮಕಾಂಡ 30:33

ಅದರ ಹಾಗೆ ತೈಲ ಮಾಡುವವನೂ ಅದನ್ನು ಅನ್ಯನಿಗೆ ಕೊಡುವವನೂ ತನ್ನ ಜನರೊಳಗಿಂದ ತೆಗೆದುಹಾಕಲ್ಪಡಬೇಕು ಎಂದು ಹೇಳು ಅಂದನು.

ಲೇವ್ಯಕಾಂಡ 15:24

ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು.

ಲೇವ್ಯಕಾಂಡ 18:19

ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.

ಯೆಹೆಜ್ಕೇಲ 18:6

ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆ ತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಾ ಗಿರುವ ಸ್ತ್ರೀ ಹತ್ತಿರ ಸವಿಾಪಿಸದೆ;

ಯೆಹೆಜ್ಕೇಲ 22:10

ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ;

Interlinear

Choose Theme