Home Bibles ಲೂಕ 19:37 · ಕನ್ನಡ ಬೈಬಲ್
ಲೂಕ 19:37 · ಕನ್ನಡ ಬೈಬಲ್

ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--

Cross references

ನಿರ್ಗಮಕಾಂಡ 15:1

ಆಗ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.

ನ್ಯಾಯಾಧಿಪತಿಗಳು 5:1

ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--

2 ಸಮುವೇಲ 6:2

ಕೆರೂಬಿಗಳ ಮಧ್ಯದಲ್ಲಿ ವಾಸವಾಗಿ ರುವ ಸೈನ್ಯಗಳ ಕರ್ತನೆಂಬ ಹೆಸರುಳ್ಳ ದೇವರ ಮಂಜೂ ಷವನ್ನು ಯೆಹೂದದ ಬಾಳಾದಿಂದ ತರುವದಕ್ಕೆ ಹೊರಟನು.

1 ಅರಸುಗಳು 8:55

ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ.

1 ದಿನವೃತ್ತಾಂತ 15:28

ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.

1 ದಿನವೃತ್ತಾಂತ 16:4

ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.

2 ದಿನವೃತ್ತಾಂತ 29:28

ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು.

2 ದಿನವೃತ್ತಾಂತ 29:36

ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.

ಎಜ್ರಾ 3:10

ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.

ಕೀರ್ತನೆಗಳು 106:12

ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.

ಮತ್ತಾಯ 21:1

ಅವರು ಯೆರೂಸಲೇಮಿಗೆ ಸಮಾಪಿಸಿ ಎಣ್ಣೇ ಮರಗಳ ಗುಡ್ಡದ ಬೇತ್ಫಗೆಗೆ ಬಂದಾಗ ಯೇಸು ಇಬ್ಬರು ಶಿಷ್ಯರನ್ನು ಕಳುಹಿಸಿ ಅವರಿಗೆ--

ಮಾರ್ಕ 13:3

ಆತನು ಎಣ್ಣೇ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತುಕೊಂಡಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು ಪ್ರತ್ಯೇಕ ವಾಗಿ ಆತನಿಗೆ--

ಮಾರ್ಕ 14:26

ಬಳಿಕ ಅವರು ಒಂದು ಸಂಗೀತ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೊರಟುಹೋದರು.

ಲೂಕ 7:16

ಆಗ ಅವರೆಲ್ಲರೂ ಭಯಹಿಡಿದವರಾಗಿ--ನಮ್ಮ ಮಧ್ಯ ದಲ್ಲಿ ಒಬ್ಬ ದೊಡ್ಡ ಪ್ರವಾದಿಯು ಎದ್ದಿದ್ದಾನೆ; --ದೇವರು ತನ್ನ ಜನರನ್ನು ದರ್ಶಿಸಿದ್ದಾನೆ ಎಂದು ದೇವ ರನ್ನು ಮಹಿಮೆಪಡಿಸುತ್ತಾ ಹೇಳಿದರು.

ಲೂಕ 18:43

ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.

ಲೂಕ 19:20

ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ.

ಯೋಹಾನ 12:12

ಮರುದಿನ ಹಬ್ಬಕ್ಕೆ ಬಂದ ಬಹಳ ಜನರು ಯೇಸು ಯೆರೂಸಲೇಮಿಗೆ ಬರುತ್ತಾನೆಂದು ಕೇಳಿದಾಗ

Interlinear

Choose Theme