Home Bibles 1 ದಿನವೃತ್ತಾಂತ 16:4 · ಕನ್ನಡ ಬೈಬಲ್
1 ದಿನವೃತ್ತಾಂತ 16:4 · ಕನ್ನಡ ಬೈಬಲ್

ಇದಲ್ಲದೆ ಕರ್ತನ ಮಂಜೂಷದ ಮುಂದೆ ಸೇವೆ ಮಾಡಲೂ ಇಸ್ರಾಯೇಲಿನ ದೇವರಾದ ಕರ್ತನನ್ನು ಸ್ಮರಿಸುವದಕ್ಕೂ ಕೊಂಡಾಡುವದಕ್ಕೂ ಹೊಗಳುವ ದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.

Cross references

ಆದಿಕಾಂಡ 17:7

ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.

ಆದಿಕಾಂಡ 32:28

ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.

ಆದಿಕಾಂಡ 33:20

ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್‌ ಎಂದು ಹೆಸರಿಟ್ಟನು.

ಅಂಕೆಗಳ ಪುಸ್ತಕ 18:1

ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು.

1 ಅರಸುಗಳು 8:15

ಅವನುನನ್ನ ತಂದೆಯಾದ ದಾವೀದನ ಸಂಗಡ ಮಾತನಾಡಿ ತನ್ನ ಕೈಯಿಂದ ನೆರವೇರಿಸಿದ ಇಸ್ರಾಯೇಲಿನ ದೇವ ರಾದ ಕರ್ತನು ಸ್ತುತಿಸಲ್ಪಡಲಿ. ಆತನು ಹೇಳಿದ್ದೇ ನಂದರೆ--

1 ದಿನವೃತ್ತಾಂತ 15:16

ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.

1 ದಿನವೃತ್ತಾಂತ 16:8

ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ.

1 ದಿನವೃತ್ತಾಂತ 16:37

ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ದಾವೀದನು ಬಿಟ್ಟವರು ಯಾರಂದರೆ--ಪ್ರತಿ ದಿವಸದ ಕಾರ್ಯದ ಪ್ರಕಾರ ಯಾವಾಗಲೂ ಮಂಜೂಷದ ಮುಂದೆ ಸೇವೆಮಾಡಲು ಆಸಾಫನನ್ನೂ ಅವನ ಸಹೋ ದರರನ್ನೂ;

1 ದಿನವೃತ್ತಾಂತ 23:2

ಇದ ಲ್ಲದೆ ತಾನು ಇಸ್ರಾಯೇಲಿನ ಸಮಸ್ತ ಪ್ರಧಾನರನ್ನೂ ಯಾಜಕರನ್ನೂ ಲೇವಿಯರನ್ನೂ ಒಟ್ಟುಗೂಡಿಸಿ ಬರ ಮಾಡಿದನು.

1 ದಿನವೃತ್ತಾಂತ 23:5

ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.

1 ದಿನವೃತ್ತಾಂತ 23:27

ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು.

1 ದಿನವೃತ್ತಾಂತ 24:3

ಆದದರಿಂದ ದಾವೀದನು ಎಲ್ಲಾ ಜಾರನ ಮಕ್ಕಳಲ್ಲಿ ಚಾದೋಕನಿಗೂ ಈತಾಮಾರನ ಮಕ್ಕಳಲ್ಲಿ ಅಹೀಮೇಲೆಕನಿಗೂ ಅವರ ಸೇವೆಯಲ್ಲಿರುವ ವಿಚಾರಗಳ ಪ್ರಕಾರ ವರ್ಗಗಳನ್ನು ವಿಭಾಗಿಸಿದನು.

1 ದಿನವೃತ್ತಾಂತ 25:1

ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್‌ ಹೇಮಾನ್‌ ಯೆದುತೂನ್‌ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು.

2 ದಿನವೃತ್ತಾಂತ 5:13

ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು.ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.

ಎಜ್ರಾ 3:10

ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು.

ನೆಹೆಮ್ಯ 12:24

ಲೇವಿಯರ ಮುಖ್ಯಸ್ಥರಾದ ಹಷ ಬ್ಯನೂ ಶೇರೇಬ್ಯನೂ ಕದ್ಮೀಯೇಲನ ಮಗನಾದ ಯೇಷೂವನೂ ಅವರಿಗೆದುರಾಗಿ ನಿಂತ ಅವರ ಸಹೋದರರೂ ದೇವರ ಮನುಷ್ಯನಾದ ದಾವೀದನ ಆಜ್ಞೆಯ ಪ್ರಕಾರ ಹೊಗಳುವದಕ್ಕೂ ಸ್ತೋತ್ರಮಾಡು ವದಕ್ಕೂ ವರ್ಗ ವರ್ಗಗಳಾಗಿದ್ದರು.

ಕೀರ್ತನೆಗಳು 37:1

ದುರ್ಮಾರ್ಗಿಗಳಿಗೋಸ್ಕರ ಕೋಪಿಸಿ ಕೊಳ್ಳಬೇಡ; ಇಲ್ಲವೆ ನೀನು ಅಕ್ರಮ ಮಾಡುವವರಿಗೆ ವಿರೋಧವಾಗಿ ಹೊಟ್ಟೇಕಿಚ್ಚು ಪಡ ಬೇಡ.

ಕೀರ್ತನೆಗಳು 70:1

ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.

ಕೀರ್ತನೆಗಳು 72:18

ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.

ಕೀರ್ತನೆಗಳು 103:2

ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.

ಕೀರ್ತನೆಗಳು 105:5

ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;

ಕೀರ್ತನೆಗಳು 106:48

ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್‌ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.

ಯೆಶಾಯ 62:6

ಓ ಯೆರೂಸಲೇಮೇ, ನಿನ್ನ ಗೋಡೆಗಳ ಮೇಲೆ ಕಾವಲುಗಾರರನ್ನು ನೇಮಿಸಿದ್ದೇನೆ; ಅವರು ಹಗಲಿ ನಲ್ಲೂ ರಾತ್ರಿಯಲ್ಲೂ ಮೌನವಾಗಿರುವದೇ ಇಲ್ಲ. ಕರ್ತನನ್ನು ಜ್ಞಾಪಕಪಡಿಸುವವರೇ, ಸುಮ್ಮನಿರಬೇಡಿರಿ.

Interlinear

Choose Theme