Home Bibles ☰ Books ನ್ಯಾಯಾಧಿಪತಿಗಳು 5:1 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 5:1 · ಕನ್ನಡ ಬೈಬಲ್

ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--

Cross references

ನಿರ್ಗಮಕಾಂಡ 15:1

ಆಗ ಮೋಶೆಯೂ ಇಸ್ರಾಯೇಲ್‌ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.

ನಿರ್ಗಮಕಾಂಡ 15:21

ಮಿರ್ಯಾಮಳು ಅವರಿಗೆ ಕೊಟ್ಟ ಉತ್ತರವೇನಂದರೆ--ನೀವು ಕರ್ತನಿಗೆ ಹಾಡಿರಿ, ಆತನು ಮಹಿಮೆಯಿಂದ ಜಯಿಸಿದ್ದಾನೆ; ಕುದುರೆಯನ್ನು ಸವಾರ ನನ್ನು ಸಮುದ್ರದಲ್ಲಿ ಹಾಕಿದ್ದಾನೆ ಎಂಬದು.

ಅಂಕೆಗಳ ಪುಸ್ತಕ 21:17

ಆಗ ಇಸ್ರಾಯೇಲ್ಯರು ಈ ಹಾಡನ್ನು ಹಾಡಿದರು; ಏನಂದರೆ--ಓ ಬಾವಿಯೇ, ಉಕ್ಕು; ಅದಕ್ಕೆ ನೀವು ಹಾಡಿರಿ.

ನ್ಯಾಯಾಧಿಪತಿಗಳು 4:4

ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿ ಇಸ್ರಾಯೇಲ್ಯರಿಗೆ ನ್ಯಾಯ ತೀರಿಸುತ್ತಿದ್ದಳು.

1 ಸಮುವೇಲ 2:1

ಹನ್ನಳು ಪ್ರಾರ್ಥಿಸಿ ಹೇಳಿದ್ದೇನಂದರೆನನ್ನ ಹೃದಯವು ಕರ್ತನಲ್ಲಿ ಸಂತೋಷಿ ಸಿತು, ನನ್ನ ಕೊಂಬು ಕರ್ತನಲ್ಲಿ ಉನ್ನತವಾಯಿತು; ನನ್ನ ಶತ್ರುಗಳ ಮೇಲೆ ನನ್ನ ಬಾಯಿ ವಿಸ್ತಾರವಾಯಿತು, ಯಾಕಂದರೆ ನಾನು ನಿನ್ನ ರಕ್ಷಣೆಯಲ್ಲಿ ಸಂತೋಷ ಪಟ್ಟೆನು.

2 ಸಮುವೇಲ 22:1

ಕರ್ತನು ದಾವೀದನನ್ನು ಅವನ ಎಲ್ಲಾ ಶತ್ರುಗಳ ಕೈಯೊಳಗಿಂದಲೂ ಸೌಲನ ಕೈಯೊಳಗಿಂದಲೂ ಬಿಡಿಸಿದ ದಿವಸದಲ್ಲಿ ಅವನು ಕರ್ತನನ್ನು ಕುರಿತು ಈ ಹಾಡಿನ ಮಾತುಗಳನ್ನು ಹೇಳಿದನು. ಏನಂದರೆ--

2 ದಿನವೃತ್ತಾಂತ 20:21

ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು.

2 ದಿನವೃತ್ತಾಂತ 20:27

ಕರ್ತನು ಅವರ ಶತ್ರುಗಳ ಮೇಲೆ ಅವರನ್ನು ಸಂತೋ ಷಪಡುವಂತೆ ಮಾಡಿದ್ದರಿಂದ ಅವರು ಸಂತೋಷವಾಗಿ ಯೆರೂಸಲೇಮಿಗೆ ತಿರಿಗಿ ಹೋಗುವದಕ್ಕೆ ಯೆಹೂದ ಯೆರೂಸಲೇಮಿನವರೆಲ್ಲರೂ ಅವರ ಮುಂಭಾಗ ದಲ್ಲಿ ಯೆಹೋಷಾಫಾಟನೂ ಹೊರಟು

ಯೋಬ 38:7

ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು.

ಕೀರ್ತನೆಗಳು 18:1

ನನ್ನ ಬಲವಾಗಿರುವ ಓ ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ.

ಯೆಶಾಯ 12:1

ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.

ಯೆಶಾಯ 25:1

ಓ ಕರ್ತನೇ, ನೀನೇ ನನ್ನ ದೇವರು ನೀನು ಸತ್ಯ ಪ್ರಾಮಾಣಿಕತೆಗಳನ್ನು (ಆಲೋ ಚಿಸಿ) ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ ಅದ್ಭುತಕಾರ್ಯಗಳನ್ನು ನಡಿಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿ ಸುವೆನು.

ಯೆಶಾಯ 26:1

ಆ ದಿವಸದಲ್ಲಿ ಯೆಹೂದ ದೇಶದೊಳಗೆ ಈ ಹಾಡನ್ನು ಹಾಡುವರು; ನಮಗೆ ಬಲ ವಾದ ಪಟ್ಟಣವಿದೆ. ರಕ್ಷಣೆಯನ್ನು ಕೋಟೆಯನ್ನಾ ಗಿಯೂ ಹೊರಪೌಳಿಯನ್ನಾಗಿಯೂ ದೇವರು ಮಾಡು ವನು.

ಲೂಕ 1:46

ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ;

ಲೂಕ 1:67

ಅವನ ತಂದೆಯಾದ ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ--

Interlinear

Choose Theme