Home Bibles ಲೂಕ 13:17 · ಕನ್ನಡ ಬೈಬಲ್
ಲೂಕ 13:17 · ಕನ್ನಡ ಬೈಬಲ್

ಆತನು ಇವುಗಳನ್ನು ಹೇಳುತ್ತಿರುವಾಗ ಆತನ ವಿರೋಧಿಗಳೆಲ್ಲರೂ ನಾಚಿಕೆಪಟ್ಟರು; ಆದರೆ ಜನರೆಲ್ಲಾ ಆತನಿಂದ ನಡೆದ ಎಲ್ಲಾ ಮಹತ್ತಾದ ಕಾರ್ಯಗಳಿಗಾಗಿ ಸಂತೋಷಪಟ್ಟರು.

Cross references

ನಿರ್ಗಮಕಾಂಡ 15:11

ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?

ಕೀರ್ತನೆಗಳು 40:14

ನನ್ನ ಪ್ರಾಣವನ್ನು ತೆಗೆಯಲು ಅದನ್ನು ಹುಡುಕುವದಕ್ಕೆ ಕೂಡಿಕೊಳ್ಳುವವರೆಲ್ಲರೂ ಆಶಾಭಂಗಪಟ್ಟು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಪಡುವವರು ಹಿಂದಕ್ಕೆ ಅಟ್ಟಲ್ಪಟ್ಟು ಅವ ಮಾನ ಹೊಂದಲಿ.

ಕೀರ್ತನೆಗಳು 109:29

ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಂಡು ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.

ಕೀರ್ತನೆಗಳು 111:3

ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ.

ಕೀರ್ತನೆಗಳು 132:18

ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.

ಯೆಶಾಯ 4:2

ಆ ದಿನದಲ್ಲಿ ಕರ್ತನ ಕೊಂಬೆಯು ಸುಂದರವಾ ಗಿಯೂ ಮಹಿಮೆಯುಳ್ಳದ್ದಾಗಿಯೂ ಇರುವದು. ಭೂಮಿಯ ಫಲವು ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಉತ್ತಮವಾಗಿಯೂ ರಮ್ಯವಾಗಿಯೂ ಇರುವದು.

ಯೆಶಾಯ 45:24

ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.

ಲೂಕ 14:6

ಇವುಗಳ ವಿಷಯವಾಗಿ ಅವರು ತಿರಿಗಿ ಆತನಿಗೆ ಉತ್ತರ ಕೊಡಲಾರದೆ ಇದ್ದರು.

ಲೂಕ 18:43

ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.

ಲೂಕ 19:37

ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--

ಲೂಕ 19:48

ಆದರೆ ಅವರು ಏನು ಮಾಡಬೇಕೆಂಬದನ್ನು ಕಂಡುಕೊಳ್ಳದೆ ಹೋದರು; ಯಾಕಂದರೆ ಜನರೆಲ್ಲರೂ ಆತನು ಹೇಳುವದನು ಬಹಳ ಲಕ್ಷ್ಯಕೊಟ್ಟು ಆತನ ಉಪದೇಶ ವನ್ನು ಕೇಳುತ್ತಿದ್ದರು.

ಲೂಕ 20:40

ಅವರು ಆತನಿಗೆ ಯಾವ ಪ್ರಶ್ನೆಯನ್ನೂ ಕೇಳುವದಕ್ಕೆ ಧೈರ್ಯಗೊಳ್ಳಲಿಲ್ಲ.

ಯೋಹಾನ 12:17

ಇದಲ್ಲದೆ ಆತನು ಲಾಜರನನ್ನು ಸಮಾ ಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರು ಸಾಕ್ಷಿಕೊಟ್ಟರು.

ಅಪೋಸ್ತಲರ ಕೃತ್ಯಗಳು 3:9

ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರೂ ನೋಡಿ

ಅಪೋಸ್ತಲರ ಕೃತ್ಯಗಳು 4:21

ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.

2 ತಿಮೋಥೆಯ 3:9

ಆದರೆ ಇವರು ಇನ್ನು ಮುಂದುವರಿಯಲಾರರು; ಈ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದು ಬಂದ ಪ್ರಕಾರ ಇವರದೂ ತಿಳಿದುಬರುವದು.

1 ಪೇತ್ರ 3:16

ಒಳ್ಳೇಮನಸ್ಸಾಕ್ಷಿ ಯುಳ್ಳವರಾಗಿರ್ರಿ; ಆಗ ನೀವು ಕೆಟ್ಟದ್ದನ್ನು ಮಾಡುವವ ರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೆಪಡುವವರು.

Interlinear

Choose Theme