ಅವನ ಶತ್ರುಗಳಿಗೆ ನಾಚಿಕೆಯನ್ನು ಹೊದಿಸುವೆನು; ಆದರೆ ಅವನ ಮೇಲೆ ಅವನ ಕಿರೀಟವು ಶೋಭಿಸುವದು ಎಂದು ಹೇಳಿದ್ದಾನೆ.
Cross references
ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು.
ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.
ನನ್ನ ಕೇಡಿನಲ್ಲಿ ಸಂತೋಷ ಪಡುವವರು ಕೂಡ ನಾಚಿಕೊಂಡು ಒಟ್ಟಿಗೆ ಗಲಿಬಿಲಿ ಯಾಗಿಲಿ, ನನಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿ ಕೊಳ್ಳುವವರು ನಾಚಿಕೆಯನ್ನೂ ಅವಮಾನವನ್ನೂ ಹೊದ್ದುಕೊಳ್ಳಲಿ.
ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು.
ಅದು ಅವ ನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ ಯಾವಾ ಗಲೂ ನಡುವಿಗೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಂಡು ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು.
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು.
ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.
ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
ಇವರು ಕುರಿಮರಿಯಾದಾತನ ಮೇಲೆ ಯುದ್ಧ ಮಾಡುವರು, ಆದರೆ ಕುರಿಮರಿ ಯಾದಾತನು ಅವರನ್ನು ಜಯಿಸುವನು; ಯಾಕಂದರೆ ಆತನು ಕರ್ತರ ಕರ್ತನೂ ರಾಜಾಧಿರಾಜನು ಆಗಿದ್ದಾನೆ. ಇದಲ್ಲದೆ ಆತನೊಂದಿಗೆ ಇರುವವರು ಕರೆಯಲ್ಪಟ್ಟ ವರೂ ಆಯಲ್ಪಟ್ಟವರೂ ನಂಬಿಗಸ್ತರು ಆಗಿದ್ದಾರೆ.