Home Bibles ಲೇವ್ಯಕಾಂಡ 23:34 · ಕನ್ನಡ ಬೈಬಲ್
ಲೇವ್ಯಕಾಂಡ 23:34 · ಕನ್ನಡ ಬೈಬಲ್

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು.

Cross references

ನಿರ್ಗಮಕಾಂಡ 23:16

ನಿನ್ನ ಹೊಲದಲ್ಲಿ ಬಿತ್ತಿದ ಬೆಳೆಯ ಪ್ರಥಮ ಫಲಗಳ ಸುಗ್ಗಿ ಹಬ್ಬವನ್ನೂ ನಿನ್ನ ಬೆಳೆಯನ್ನು ಹೊಲದಿಂದ ಕೂಡಿಸಿದ ಮೇಲೆ ವರುಷದ ಅಂತ್ಯದಲ್ಲಿ ಕೂಡಿಸುವ ಹಬ್ಬವನ್ನೂ ಆಚರಿಸಬೇಕು.

ನಿರ್ಗಮಕಾಂಡ 34:22

ಪ್ರಥಮ ಗೋದಿ ಸುಗ್ಗಿಯ ವಾರಗಳ ಹಬ್ಬವನ್ನೂ ಸಂವತ್ಸರದ ಕೊನೆಯಲ್ಲಿ (ಬೆಳೆ) ಸಂಗ್ರಹದ ಹಬ್ಬ ವನ್ನೂ ಆಚರಿಸಬೇಕು.

ಅಂಕೆಗಳ ಪುಸ್ತಕ 29:12

ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು.

ದ್ವಿತೀಯೋಪದೇಶಕಾಂಡ 16:13

ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.

ದ್ವಿತೀಯೋಪದೇಶಕಾಂಡ 31:10

ಮೋಶೆಯು ಅವರಿಗೆ--ಪ್ರತಿ ಏಳು ವರುಷಗಳ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರುಷದಲ್ಲಿ, ಅಂದರೆ ಗುಡಾರಗಳ ಹಬ್ಬದಲ್ಲಿ

1 ಅರಸುಗಳು 8:2

ಏಳನೇ ತಿಂಗಳಾದ ಏತಾನೀಮ್‌ ಎಂಬ ತಿಂಗಳಲ್ಲಿ ಹಬ್ಬವಿದ್ದಾಗ ಇಸ್ರಾ ಯೇಲಿನ ಸಮಸ್ತ ಮನುಷ್ಯರು ಅರಸನಾದ ಸೊಲೊ ಮೋನನ ಬಳಿಗೆ ಕೂಡಿಬಂದರು.

1 ಅರಸುಗಳು 12:32

ಯಾರೊಬ್ಬಾಮನು ಎಂಟನೇ ತಿಂಗಳ ಹದಿ ನೈದನೇ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ ಪೀಠದ ಮೇಲೆ ಬಲಿಗ ಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿ ನಲ್ಲಿ ಮಾಡಿ ಅವನು ಉಂಟುಮಾಡಿದ ಹೋರಿಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ಮಾಡಿದ ಉನ್ನತ ಸ್ಥಳಗಳ ಯಾಜಕರನ್ನೇ ನೇಮಿಸಿದನು.ಹೀಗೆಯೇ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೇ ತಿಂಗಳ ಹದಿನೈದನೇ ದಿವಸದಲ್ಲಿ ಅವನು ಬೇತೇಲಿನಲ್ಲಿ ಉಂಟುಮಾಡಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ ಇಸ್ರಾಯೇಲಿನ ಮಕ್ಕಳಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು.

ಎಜ್ರಾ 3:4

ಇದಲ್ಲದೆ ಬರೆ ಯಲ್ಪಟ್ಟ ಹಾಗೆಯೇ ಅವರು ಪರ್ಣಶಾಲೆಗಳ ಹಬ್ಬ ವನ್ನು ಆಚರಿಸಿ ಪ್ರತಿದಿನದ ಕಾರ್ಯಕ್ಕೆ ತಕ್ಕ ನೇಮಕದ ಹಾಗೆ ಲೆಕ್ಕದಿಂದ ದಿನದಿನದ ದಹನಬಲಿ ಗಳನ್ನು ಅರ್ಪಿಸಿದರು.

ನೆಹೆಮ್ಯ 8:14

ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು.

ಯೆಹೆಜ್ಕೇಲ 45:25

ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.

ಜೆಕರ್ಯ 14:16

ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.

ಜೆಕರ್ಯ 14:18

ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು.

ಜೆಕರ್ಯ 14:19

ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.

ಯೋಹಾನ 1:14

ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).

ಯೋಹಾನ 7:2

ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.

ಹೆಬ್ರಿಯರಿಗೆ 11:9

ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು.

ಹೆಬ್ರಿಯರಿಗೆ 11:13

ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು.

Interlinear

Choose Theme