Home Bibles ನೆಹೆಮ್ಯ 8:14 · ಕನ್ನಡ ಬೈಬಲ್
ನೆಹೆಮ್ಯ 8:14 · ಕನ್ನಡ ಬೈಬಲ್

ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು.

Cross references

ಆದಿಕಾಂಡ 33:17

ಯಾಕೋ ಬನು ಪ್ರಯಾಣಮಾಡಿ ಸುಕ್ಕೋತಿಗೆ ಹೋಗಿ ಮನೆಯನ್ನು ಕಟ್ಟಿಸಿಕೊಂಡನು; ಇದಲ್ಲದೆ ತನ್ನ ಮಂದೆಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದದರಿಂದ ಆ ಸ್ಥಳಕ್ಕೆ ಸುಕ್ಕೋತ್‌ ಎಂದು ಹೆಸರಾಯಿತು.

ಲೇವ್ಯಕಾಂಡ 23:34

ಇಸ್ರಾಯೇಲ್‌ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು.

ಲೇವ್ಯಕಾಂಡ 23:40

ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು.

ದ್ವಿತೀಯೋಪದೇಶಕಾಂಡ 16:13

ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು.

ಜೆಕರ್ಯ 14:16

ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು.

ಯೋಹಾನ 7:2

ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.

Interlinear

Choose Theme