ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು.
Cross references
ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು.
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶವು ನೀನು ಹೊರಟ ಐಗುಪ್ತದೇಶದ ಹಾಗಲ್ಲ; ಅಲ್ಲಿ ನೀನು ನಿನ್ನ ಬೀಜವನ್ನು ಬಿತ್ತಿ ಪಲ್ಯಗಳ ತೋಟಕ್ಕೆ ಮಾಡುವ ಹಾಗೆ ನಿನ್ನ ಕಾಲಿನಿಂದ ನೀರು ಹಣಿಸಿದಿಯಲ್ಲಾ.
ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು.
ಇದಾದ ಮೇಲೆ ಒಂದು ಅಮಾವಾಸ್ಯೆಯಿಂದ ಇನ್ನೊಂದಕ್ಕೂ ಒಂದು ಸಬ್ಬತ್ತಿನಿಂದ ಇನ್ನೊಂದಕ್ಕೂ ಮನುಷ್ಯರೆಲ್ಲಾ ನನ್ನ ಮುಂದೆ ಆರಾಧಿಸುವದಕ್ಕೆ ಬರುವರೆಂದು ಕರ್ತನು ಹೇಳುತ್ತಾನೆ.ಅವರು ಮುಂದೆ ಹೋಗಿ ನನಗೆ ವಿರೋಧವಾಗಿ ದ್ರೋಹ ಮಾಡಿದ ಮನುಷ್ಯರ ಹೆಣಗಳನ್ನು ನೋಡುವರು; ಯಾಕಂದರೆ ಅವರ ಹುಳ ಸಾಯುವದಿಲ್ಲ; ಅವರ ಬೆಂಕಿ ಆರುವದಿಲ್ಲ; ಅವರು ಎಲ್ಲಾ ಮನುಷ್ಯರಿಗೆ ಹೇಸಿಕೆಯಾಗುವರು.
ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ, ಜನಾಂಗಗಳೊಳಗೆ ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವದು; ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸ ಲಾರರು.
ಯೆರೂಸಲೇಮಿಗೆ ವಿರೋಧವಾಗಿ ದಂಡುಕಟ್ಟಿ ಕೊಂಡಿರುವ ಎಲ್ಲಾ ಜನಗಳನ್ನು ಕರ್ತನು ವ್ಯಾಧಿ ಯಿಂದ ಬಾಧಿಸುವನು; ಹೀಗೆಯೇ ಅವರು ಕಾಲಿನ ಮೇಲೆ ನಿಲ್ಲುವಾಗ ಅವರ ಶರೀರವು ಕ್ಷಯಿಸಿಹೋಗು ವದು; ಅವರ ಕಣ್ಣುಗಳು ಗುಣಿಗಳಲ್ಲಿ ಇಂಗಿಹೋಗು ವವು; ಅವರ ನಾಲಿಗೆ ಅವರ ಬಾಯಲ್ಲಿ ಕ್ಷಯಿಸಿ ಹೋಗುವದು.
ಆ ಗುಡಾರಗಳಲ್ಲಿರುವ ಕುದುರೆ, ಹೇಸರಕತ್ತೆ, ಒಂಟೆ, ಕತ್ತೆ ಮೊದಲಾದ ಎಲ್ಲಾ ಪಶುಗಳ ಬಾಧೆಯು ಈ ಬಾಧೆಯ ಹಾಗೆಯೇ ಇರುವದು.