Home Bibles ☰ Books ಲೇವ್ಯಕಾಂಡ 14:10 · ಕನ್ನಡ ಬೈಬಲ್
ಲೇವ್ಯಕಾಂಡ 14:10 · ಕನ್ನಡ ಬೈಬಲ್

ಎಂಟನೆಯ ದಿವಸದಲ್ಲಿ ಅವನು ದೋಷವಿಲ್ಲದ ಎರಡು ಕುರಿಮರಿ ಗಳನ್ನು ಒಂದು ವರುಷದ ದೋಷವಿಲ್ಲದ ಹೆಣ್ಣು ಕುರಿಯನ್ನು ಆಹಾರ ಸಮರ್ಪಣೆಗಾಗಿ ಹತ್ತರಲ್ಲಿ ಮೂರರಷ್ಟು ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು.

Cross references

ನಿರ್ಗಮಕಾಂಡ 29:40

ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.

ಲೇವ್ಯಕಾಂಡ 1:3

ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.

ಲೇವ್ಯಕಾಂಡ 1:10

ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು.

ಲೇವ್ಯಕಾಂಡ 2:1

ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು.

ಲೇವ್ಯಕಾಂಡ 2:11

ಕರ್ತನಿಗೆ ನೀನು ತರುವ ಆಹಾರ ಸಮರ್ಪಣೆಯು ಯಾವದೂ ಹುಳಿಯಿಂದ ಮಾಡಿದ್ದಾಗಿರಬಾರದು; ಕರ್ತನಿಗೆ ನೀವು ಬೆಂಕಿಯಿಂದ ಮಾಡುವ ಎಲ್ಲಾ ಸಮರ್ಪಣೆಗಳಲ್ಲಿ ಹುಳಿಯನ್ನಾಗಲಿ ಜೇನನ್ನಾಗಲಿ ಸುಡಬಾರದು.

ಲೇವ್ಯಕಾಂಡ 2:13

ನಿನ್ನ ಪ್ರತಿ ಯೊಂದು ಆಹಾರ ಸಮರ್ಪಣೆಯೂ ಉಪ್ಪಿನಲ್ಲಿ ಬೆರಿಕೆ ಯಾಗಿರಬೇಕು; ನಿನ್ನ ದೇವರ ಒಡಂಬಡಿಕೆಯನ್ನು ಸೂಚಿಸುವ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು; ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.

ಲೇವ್ಯಕಾಂಡ 4:32

ಅವನು ಪಾಪದ ಬಲಿಗಾಗಿ ಒಂದು ಕುರಿಮರಿ ಯನ್ನು ತರುವದಾದರೆ ದೋಷವಿಲ್ಲದ ಒಂದು ಹೆಣ್ಣನ್ನು ತರಬೇಕು;

ಲೇವ್ಯಕಾಂಡ 9:1

ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು;

ಲೇವ್ಯಕಾಂಡ 14:12

ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು.

ಲೇವ್ಯಕಾಂಡ 14:15

ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.

ಲೇವ್ಯಕಾಂಡ 14:21

ಅವನು ಬಡವನಾಗಿದ್ದರೆ ಅಷ್ಟೊಂದು ತರುವದಕ್ಕೆ ಆಗದಿದ್ದರೆ ತನ್ನ ಪ್ರಾಯಶ್ಚಿತ್ತ ಅಪರಾಧದ ಬಲಿಗಾಗಿ ಆಡಿಸುವದಕ್ಕೆ ಒಂದು ಕುರಿ ಮರಿಯನ್ನೂ ಎಣ್ಣೆಬೆರೆಸಿದ ಹತ್ತರಲ್ಲೊಂದು ಭಾಗ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ

ಲೇವ್ಯಕಾಂಡ 14:23

ಅವನು ತನ್ನ ಅಶುದ್ಧತೆ ಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ಸಭೆಯ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಕರ್ತನ ಎದುರಿನಲ್ಲಿ ತರಬೇಕು.

ಲೇವ್ಯಕಾಂಡ 15:13

ಸ್ರಾವವುಳ್ಳವನು ತನ್ನ ಸ್ರಾವದಿಂದ ಶುದ್ಧನಾದರೆ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕಮಾಡಿ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ತನ್ನ ಶರೀರವನ್ನು ತೊಳೆದುಕೊಳ್ಳಬೇಕು; ಆಗ ಅವನು ಶುದ್ಧನಾಗಿರುವನು.

ಲೇವ್ಯಕಾಂಡ 23:13

ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು.

ಅಂಕೆಗಳ ಪುಸ್ತಕ 6:14

ಅವನು ಕರ್ತನಿಗೆ ತನ್ನ ಅರ್ಪಣೆಯನ್ನು ಅರ್ಪಿಸ ಬೇಕು; ಅದೇನಂದರೆ, ದಹನ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಟಗರಿನ ಮರಿಯನ್ನೂ ಪಾಪದ ಬಲಿಗಾಗಿ ಒಂದು ವರುಷದ ದೋಷವಿಲ್ಲದ ಒಂದು ಕುರಿಮರಿಯನ್ನೂ ಸಮಾಧಾನದ ಬಲಿಗಾಗಿ ದೋಷವಿಲ್ಲದ ಒಂದು ಟಗರನ್ನೂ ತರಬೇಕು.

ಅಂಕೆಗಳ ಪುಸ್ತಕ 7:43

ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.

ಅಂಕೆಗಳ ಪುಸ್ತಕ 15:4

ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು

ಅಂಕೆಗಳ ಪುಸ್ತಕ 28:20

ಅವುಗಳ ಆಹಾರದ ಅರ್ಪಣೆಯನ್ನೂ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶ ಗಳನ್ನೂ ಅರ್ಪಿಸಬೇಕು.

Interlinear

Choose Theme