ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ
Cross references
ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಯೇಸು ಅವನಿಗೆ--ನೀನು ಯಾರಿಗೂ ಹೇಳಬೇಡ ನೋಡು; ಹೊರಟುಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು ಎಂದು ಹೇಳಿದನು.
ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ;
ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು.
ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.
ನಾವು ತಾಳ್ಮೆಯ ಮತ್ತು ಬರಹಗಳ ಆದರಣೆಯ ಮೂಲಕ ನಿರೀಕ್ಷೆ ಹೊಂದುವಂತೆ ಪೂರ್ವಕಾಲದಲ್ಲಿ ಬರೆಯಲ್ಪಟ್ಟವುಗಳೆಲ್ಲಾ ನಮಗೆ ಉಪದೇಶಿಸುವ ದಕ್ಕಾಗಿಯೇ ಬರೆಯಲ್ಪಟ್ಟವು.
ಅವರಿಗೆ ಸಂಭವಿಸಿದ ಈ ಎಲ್ಲಾ ಸಂಗತಿಗಳು ನಿದರ್ಶನಗಳಾಗಿವೆ; ಲೋಕದ ಅಂತ್ಯಕ್ಕೆ ಬಂದಿರುವ ವರಾದ ನಮಗೆ ಅವು ಬುದ್ಧಿವಾದಗಳಾಗಿ ಬರೆದವೆ.