Home Bibles ನಿರ್ಗಮಕಾಂಡ 29:40 · ಕನ್ನಡ ಬೈಬಲ್
ನಿರ್ಗಮಕಾಂಡ 29:40 · ಕನ್ನಡ ಬೈಬಲ್

ಹಿನ್ನಿನ ನಾಲ್ಕನೆಯ ಒಂದು ಪಾಲಿನಷ್ಟು ಹಿಂಡಿದ ಎಣ್ಣೆ ಹೊಯಿದ ನಯವಾದ ಹಿಟ್ಟಿನ ಹತ್ತನೆಯ ಪಾಲೂ ಹಿನ್ನಿನ ನಾಲ್ಕನೆಯ ಪಾಲಿನಷ್ಟು ದ್ರಾಕ್ಷಾರಸದ ಪಾನ ದರ್ಪಣೆಯೂ ಒಂದು ಕುರಿಮರಿಯೊಂದಿಗೆ ಅರ್ಪಿಸ ಬೇಕು.

Cross references

ಆದಿಕಾಂಡ 35:14

ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.

ನಿರ್ಗಮಕಾಂಡ 16:36

ಓಮೆರ್‌ ಅಂದರೆ ಎಫದಲ್ಲಿ ಹತ್ತನೆಯ ಒಂದು ಪಾಲು.

ನಿರ್ಗಮಕಾಂಡ 30:24

ಐದುನೂರು ಶೆಕೆಲ್‌ದಾಲ್ಚಿನ್ನಿಯನ್ನು, ಪರಿಶುದ್ಧ ಸ್ಥಳದ ಶೆಕೆಲಿನ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಹಿಪ್ಪೆ ಎಣ್ಣೆಯ ಒಂದು ಹಿನ್ನೆಯನ್ನು ಸಹ ತೆಗೆದುಕೊಂಡು,

ಲೇವ್ಯಕಾಂಡ 6:13

ಯಜ್ಞವೇದಿಯ ಮೇಲೆ ಬೆಂಕಿಯು ಯಾವಾಗಲೂ ಉರಿಯುತ್ತಿರಬೇಕು. ಅದು ಎಂದಿಗೂ ಆರಿಹೋಗಬಾರದು.

ಲೇವ್ಯಕಾಂಡ 23:13

ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು.

ಅಂಕೆಗಳ ಪುಸ್ತಕ 4:16

ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.

ಅಂಕೆಗಳ ಪುಸ್ತಕ 6:15

ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿ ಯಿಲ್ಲದ ರೊಟ್ಟಿಗಳ ಒಂದು ಪುಟ್ಟಿಯನ್ನೂ ಎಣ್ಣೇ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ ಅವುಗಳ ಆಹಾರದ ಅರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ತರಬೇಕು.

ಅಂಕೆಗಳ ಪುಸ್ತಕ 15:4

ತರುವಾಯ ಕರ್ತನಿಗೆ ತನ್ನ ಅರ್ಪಣೆಯನ್ನು ತರುವವನು ತರಬೇಕಾದದ್ದೇನಂದರೆಆಹಾರದ ಅರ್ಪಣೆಗಾಗಿ ಹಿಟ್ಟಿನ ನಾಲ್ಕನೆಯ ಪಾಲಷ್ಟು ಎಣ್ಣೇ ಬೆರೆಸಿದ ಹಿಟ್ಟಿನ ದಶಮ ಭಾಗವನ್ನು

ಅಂಕೆಗಳ ಪುಸ್ತಕ 15:5

ಪಾನದ ಅರ್ಪಣೆಗಾಗಿ ದಹನಬಲಿಯ ಸಂಗಡವೂ ಇಲ್ಲವೆ ಬಲಿಯ ಸಂಗಡವೂ ಒಂದು ಕುರಿಗೋಸ್ಕರ ಹಿನ್ನಿನ ನಾಲ್ಕನೇ ಭಾಗದ ದ್ರಾಕ್ಷಾರಸವನ್ನು ಅರ್ಪಿಸಬೇಕು.

ಅಂಕೆಗಳ ಪುಸ್ತಕ 15:7

ಪಾನದ ಅರ್ಪಣೆಯನ್ನು ಕರ್ತನಿಗೆ ಸುವಾಸನೆಗಾಗಿ ಹಿನ್ನಿನ ಮೂರನೇ ಪಾಲು ದ್ರಾಕ್ಷಾರಸವನ್ನು ಅರ್ಪಿಸ ಬೇಕು.

ಅಂಕೆಗಳ ಪುಸ್ತಕ 15:9

ಅವನು ಆಹಾರದ ಅರ್ಪಣೆಗಾಗಿ ಅರ್ಧ ಹಿನ್ನಿನ ಎಣ್ಣೇ ಬೆರೆಸಿದ ಮೂರು ದಶಮಾಂಶದ ಹಿಟ್ಟನ್ನು ಒಂದು ಹೋರಿಯೊಂದಿಗೆ ತರಬೇಕು.

ಅಂಕೆಗಳ ಪುಸ್ತಕ 15:24

ಅದು ಸಭೆಗೆ ತಿಳಿಯದೆ ತಪ್ಪು ಆಗಿರುವ ಪಕ್ಷದಲ್ಲಿ ಸಭೆಯು ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ಒಂದು ಎಳೇ ಹೋರಿಯನ್ನೂ ಕ್ರಮದ ಪ್ರಕಾರ ಅದರ ಆಹಾರದ ಅರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಪಾಪ ಬಲಿಯಾಗಿ ಮೇಕೆಗಳಿಂದ ಒಂದು ಹೋತವನ್ನೂ ಅರ್ಪಿಸಬೇಕು.

ಅಂಕೆಗಳ ಪುಸ್ತಕ 28:5

ಆಹಾರದ ಅರ್ಪಣೆಗಾಗಿ ಹಿನ್ನಿನ ನಾಲ್ಕನೇ ಪಾಲು, ಕುಟ್ಟಿದ ಎಣ್ಣೆ ಕಲಸಿದ ಹಿಟ್ಟಿನ ಏಫದ ಹತ್ತನೇ ಪಾಲು. ಇದು ಸೀನಾಯಿ ಪರ್ವತದಲ್ಲಿ ಕರ್ತನಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.

ಅಂಕೆಗಳ ಪುಸ್ತಕ 28:10

ನಿತ್ಯ ದಹನಬಲಿಯ ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ದಹನ ಬಲಿಯೂ ಅದರ ಪಾನದ ಅರ್ಪಣೆಯೂ ಇದೇ.

ಅಂಕೆಗಳ ಪುಸ್ತಕ 28:13

ಒಂದೊಂದು ಕುರಿಮರಿಗೆ ಆಹಾರದ ಅರ್ಪಣೆಯಾಗಿ ಎಣ್ಣೇ ಕಲಸಿದ ಹಿಟ್ಟಿನ ಒಂದು ದಶಾಂಶವು, ಕರ್ತನಿಗೆ ಸುವಾಸನೆಯ ದಹನ ಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯು ಇದೇ.

ಅಂಕೆಗಳ ಪುಸ್ತಕ 28:24

ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೂ ದಿನ ದಿನಕ್ಕೆ ಕರ್ತನಿಗೆ ಸುವಾಸೆನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು; ಅದನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.

ಅಂಕೆಗಳ ಪುಸ್ತಕ 29:16

ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು.

ದ್ವಿತೀಯೋಪದೇಶಕಾಂಡ 32:38

ಅವರ ಬಲಿಗಳ ಕೊಬ್ಬನ್ನು ತಿಂದಂಥ, ಅವರ ಪಾನದ ಅರ್ಪಣೆಗಳ ದ್ರಾಕ್ಷಾರಸ ಕುಡಿದಂಥ ಅವರ ಬಂಡೆಯು ಎಲ್ಲಿ? ಅವರು ಎದ್ದು ನಿಮಗೆ ಸಹಾಯ ಮಾಡಲಿ; ನಿಮಗೋಸ್ಕರ ಕಾವಲಾಗಲಿ.

ಯೆಶಾಯ 57:6

ಹಳ್ಳದ ನುಣುಪಾದ ಕಲ್ಲುಗಳು ನಿನ್ನ ಪಾಲು, ಅವುಗಳೇ ಹೌದು, ಅವೇ ನಿನ್ನ ಪಾಲು, ಅವುಗಳಿಗೆ ನೀನು ಪಾನದ್ರವ್ಯವನ್ನು ಮತ್ತು ಆಹಾರದರ್ಪಣೆಯನ್ನು ಅರ್ಪಿಸಿದ್ದೀ, ಇವುಗಳಿಂದ ನಾನು ಆದರಣೆ ಹೊಂದ ಬೇಕೋ?

ಯೆಹೆಜ್ಕೇಲ 4:11

ನೀನು ನೀರನ್ನು ಸಹ ಅಳತೆಯ ಪ್ರಕಾರ ಕುಡಿಯಬೇಕು. ಹಿನ್ನಿನ ಆರನೆಯ ಪಾಲನ್ನು ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು.

ಯೆಹೆಜ್ಕೇಲ 20:28

ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.

ಯೆಹೆಜ್ಕೇಲ 45:17

ಹಬ್ಬಗಳಲ್ಲಿಯೂ ಅಮಾ ವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮ ಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವದು ಪ್ರಭುವಿನ ಕೆಲಸವಾಗಿರುವದು; ಅವನೇ ಇಸ್ರಾಯೇ ಲಿನ ಮನೆತನದವರಿಗಾಗಿ ಸಮಾಧಾನಕ್ಕಾಗಿ ಪಾಪಬಲಿ ಯನ್ನೂ ಅರ್ಪಣೆಯನ್ನೂ ದಹನಬಲಿಯನ್ನೂ ಸಮಾಧಾನ ಯಜ್ಞವನ್ನೂ ಸಿದ್ಧಮಾಡಬೇಕು.

ಯೆಹೆಜ್ಕೇಲ 45:24

ಅವನು ಹೋರಿಗೆ ಒಂದು ಏಫ, ಟಗರಿಗೆ ಒಂದು ಏಫ, ಈ ಪ್ರಕಾರ ಆಹಾರ ಅರ್ಪಣೆಯನ್ನೂ, ಏಫಕ್ಕೆ ಒಂದು ಹಿನ್ನು ಎಣ್ಣೆಯನ್ನೂ ಸಿದ್ಧಮಾಡಬೇಕು.ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.

ಯೆಹೆಜ್ಕೇಲ 46:5

ಹೇಗಂದರೆ ಆಹಾರದ ಅರ್ಪಣೆಯಾಗಿ ಟಗರಿಗೆ ಒಂದು ಎಫ, ಕುರಿಮರಿಗೆ ತಕ್ಕ ಅವನ ಕೈಲಾದಂತ ಆಹಾರ ಅರ್ಪ ಣೆಯು ಒಂದಕ್ಕೆ ಎಣ್ಣೆಯ ಒಂದು ಹಿನ್ನನ್ನು ಅರ್ಪಿಸ ಬೇಕು;

ಯೆಹೆಜ್ಕೇಲ 46:7

ಅವನು ಹೋರಿಗೆ ಒಂದು ಏಫವನ್ನೂ ಟಗರಿಗೆ ಒಂದು ಏಫವನ್ನೂ ಮತ್ತು ಕುರಿಮರಿಗೆ ಅವನ ಕೈಲಾಗುವಷ್ಟು ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನನ್ನು ಅವನು ಆಹಾರದ ಅರ್ಪಣೆಗಾಗಿ ಸಿದ್ಧ ಮಾಡಬೇಕು.

ಯೆಹೆಜ್ಕೇಲ 46:11

ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.

ಯೆಹೆಜ್ಕೇಲ 46:14

ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಏಫದ ಆರನೇ ಪಾಲನ್ನು ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಎಣ್ಣೆಯ ಹಿನ್ನಿನಲ್ಲಿ ಮೂರನೇ ಪಾಲನ್ನು ಸಿದ್ಧಮಾಡಬೇಕು. ಇದು ಕರ್ತನಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದೆ ಆಹಾರದ ಅರ್ಪಣೆಯಾಗಿದೆ.

ಯೋವೇಲ 1:9

ಆಹಾರ ದರ್ಪಣೆಯೂ ಪಾನಾರ್ಪಣೆಯೂ ಕರ್ತನ ಆಲಯದೊಳಗಿಂದ ತೆಗೆಯಲ್ಪಟ್ಟಿವೆ; ಕರ್ತನ ಸೇವಕ ರಾದ ಯಾಜಕರು ಗೋಳಾಡುತ್ತಾರೆ.

ಯೋವೇಲ 1:13

ಯಾಜಕರೇ, ನಿಮ್ಮ ನಡುಕಟ್ಟಿಕೊಂಡು ಗೋಳಾ ಡಿರಿ; ಬಲಿಪೀಠದ ಸೇವಕರೇ, ಗೋಳಾಡಿರಿ; ನನ್ನ ದೇವರ ಸೇವಕರೇ, ಬಂದು ಗೋಣೀತಟ್ಟಿನಲ್ಲಿ ರಾತ್ರಿ ಯೆಲ್ಲಾ ಮಲಗಿರಿ, ಯಾಕಂದರೆ ಆಹಾರದರ್ಪಣೆಯೂ ಪಾನ ದರ್ಪಣೆಯೂ ನಿಮ್ಮ ದೇವರ ಆಲಯದಿಂದ ಹಿಂತೆಗೆಯಲ್ಪಟ್ಟಿವೆ.

ಯೋವೇಲ 2:14

ಆತನು ತಿರುಗಿಕೊಂಡು ಪಶ್ಚಾತ್ತಾಪಪಟ್ಟು ತನ್ನ ಹಿಂದೆ ಆಶೀರ್ವಾದವನ್ನು ಅಂದರೆ ನಿಮ್ಮ ದೇವರಾದ ಕರ್ತನಿಗಾಗಿ ಆಹಾರ ದರ್ಪಣೆಯನ್ನೂ ಪಾನದರ್ಪಣೆಯನ್ನೂ ಉಳಿಸುವ ನೇನೋ ಯಾರು ಬಲ್ಲರು?

ಫಿಲಿಪ್ಪಿಯವರಿಗೆ 2:17

ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.

Interlinear

Choose Theme