Home Bibles ವಿಲಾಪಗಳು 5:9 · ಕನ್ನಡ ಬೈಬಲ್
ವಿಲಾಪಗಳು 5:9 · ಕನ್ನಡ ಬೈಬಲ್

ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.

Cross references

ನ್ಯಾಯಾಧಿಪತಿಗಳು 6:11

ಕರ್ತನ ದೂತನು ಬಂದು ಅಬೀಯೆಜೆರನಾದ ಯೋವಾಷನು ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗ ನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷೇ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.

2 ಸಮುವೇಲ 23:17

ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.

ಯೆರೆಮಿಯ 40:9

ಇಷ್ಮಾಯೇಲನು ಗೆದಲ್ಯನ ನಿಮಿತ್ತ ಕೊಂದು ಹಾಕಿದ ಮನುಷ್ಯರೆಲ್ಲರ ಹೆಣಗಳನ್ನು ಹಾಕಿದ ಕುಣಿಯು ಯಾವದಂದರೆ--ಅರಸನಾದ ಆಸನು ಇಸ್ರಾಯೇಲಿನ ಅರಸನಾದ ಬಾಷನ ಭಯದಿಂದ ಮಾಡಿದ್ದೇ; ಇದನ್ನು ನೆತನ್ಯನ ಮಗನಾದ ಇಷ್ಮಾಯೇಲನು ಕೊಂದುಹಾಕಿದ ವರಿಂದ ತುಂಬಿಸಿದನು.

ಯೆರೆಮಿಯ 41:1

ಆಗ ಸೈನ್ಯಾಧಿಪತಿಗಳೆಲ್ಲರೂ ಕಾರೇಹನ ಮಗನಾದ ಯೋಹಾನಾನನೂ ಹೋಷಾ ಯನ ಮಗನಾದ ಯೆಜನ್ಯನೂ ಕಿರಿಯರು ಮೊದಲು ಗೊಂಡು ಹಿರಿಯರ ವರೆಗೆ ಜನರೆಲ್ಲರೂ ಹತ್ತಿರ ಬಂದು

ಯೆರೆಮಿಯ 41:18

ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಕೋಪವೂ ನನ್ನ ಉರಿಯೂ ಹೇಗೆ ಯೆರೂಸಲೇಮಿನ ನಿವಾಸಿಗಳ ಮೇಲೆ ಹೊಯ್ಯಲ್ಪಟ್ಟಿತೋ ಹಾಗೆಯೇ ನೀವು ಐಗುಪ್ತಕ್ಕೆ ಹೋದರೆ ನನ್ನ ಉರಿಯು ನಿಮ್ಮ ಮೇಲೆ ಹೊಯ್ಯಲ್ಪ ಡುವದು; ನೀವು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವಿರಿ; ಈ ಸ್ಥಳವನ್ನು ನೀವು ತಿರುಗಿ ನೋಡುವದಿಲ್ಲ.

ಯೆಹೆಜ್ಕೇಲ 4:16

ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.

ಯೆಹೆಜ್ಕೇಲ 12:18

ಮನುಷ್ಯಪುತ್ರನೇ, ನಿನ್ನ ರೊಟ್ಟಿ ಯನ್ನು ನಡುಕದಿಂದ ತಿನ್ನು ಮತ್ತು ನೀರನ್ನು ದಿಗಿಲಿ ನಿಂದಲೂ ಎಚ್ಚರಿಕೆಯಿಂದಲೂ ಕುಡಿ.

Interlinear

Choose Theme