ಕರ್ತನ ದೂತನು ಬಂದು ಅಬೀಯೆಜೆರನಾದ ಯೋವಾಷನು ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗ ನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷೇ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.
Cross references
ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು
ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.
ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ;
ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು.
ಅವ್ವೀಮ್, ಪಾರಾ, ಒಫ್ರಾ, ಅಮ್ಮೋನ್ಯ,
ಕರ್ತನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು--ನಾನು ನಿಮ್ಮನ್ನು ಐಗುಪ್ತ ದಿಂದ ಬರಮಾಡಿ ನಿಮ್ಮ ತಂದೆಗಳಿಗೆ ಆಣೆಯಿಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.
ನೀವು ಮೇರೋಜನ್ನು ಶಪಿಸಿರಿ; ಅದರ ನಿವಾಸಿಗಳನ್ನು ಕಠಿಣವಾಗಿ ಶಪಿಸಿರಿ ಎಂದು ಕರ್ತನ ದೂತನು ಹೇಳುತ್ತಾನೆ; ಯಾಕಂದರೆ ಅವರು ಕರ್ತನ ಸಹಾಯಕ್ಕೂ ಪರಾಕ್ರಮಶಾಲಿಗಳಿಗೆ ವಿರೋ ಧವಾಗಿ ಕರ್ತನ ಸಹಾಯಕ್ಕೂ ಬಾರದೆ ಹೋದರು.
ಕರ್ತನು ಅವನನ್ನು ದೃಷ್ಟಿಸಿ ನೋಡಿ--ಈ ನಿನ್ನ ಶಕ್ತಿಯಿಂದ ಹೋಗು; ನೀನು ಇಸ್ರಾಯೇಲನ್ನು ಮಿದ್ಯಾನ್ಯರ ಕೈಯಿಂದ ತಪ್ಪಿಸಿ ರಕ್ಷಿ ಸುವಿ; ನಾನು ನಿನ್ನನ್ನು ಕಳುಹಿಸಲಿಲ್ಲವೋ ಅಂದನು.
ಅವನು ಅವರಿಗೆನೀವು ಮಾಡಿದ್ದಕ್ಕೆ ಸಮಾನವಾಗಿ ನಾನೇನು ಮಾಡಿ ದೆನು? ಅಬೀಯೆಜೆರನ ದ್ರಾಕ್ಷೇ ಫಲ ಕೂಡಿಸುವ ದಕ್ಕಿಂತ ಎಫ್ರಾಯಾಮನ ದ್ರಾಕ್ಷೇ ಹಕ್ಕಲು ಉತ್ತಮ ವಲ್ಲವೇ?
ಅವನು ಒಫ್ರದಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ತನ್ನ ಸಹೋದರರಾದ ಯೆರುಬ್ಬಾಳನ ಎಪ್ಪತ್ತು ಮಂದಿ ಕುಮಾರರನ್ನು ಒಂದು ಕಲ್ಲಿನ ಮೇಲೆ ಕೊಂದು ಹಾಕಿದನು. ಆದರೆ ಯೆರುಬ್ಬಾಳನ ಚಿಕ್ಕ ಮಗನಾದ ಯೋತಾಮನು ಒಬ್ಬನೇ ಉಳಿದನು; ಯಾಕಂದರೆ ಅವನು ಅಡಗಿಕೊಂಡನು.
ಅವನ ಹೆಂಡತಿಯು ಹೆರದೆ ಬಂಜೆಯಾಗಿದ್ದಳು. ಕರ್ತನ ದೂತನು ಆ ಸ್ತ್ರೀಗೆ ಪ್ರತ್ಯಕ್ಷ ವಾಗಿ ಅವಳಿಗೆ--ಇಗೋ, ನೀನು ಹೆರದೆ ಬಂಜೆಯಾ ಗಿದ್ದೀ. ಆದರೆ ನೀನು ಗರ್ಭ ಧರಿಸಿ ಒಬ್ಬ ಮಗನನ್ನು ಹೆರುವಿ.
ಆದರೆ ಕರ್ತನ ದೂತನು ಅವನಿಗೆ--ನನ್ನ ಹೆಸರು ಏನೆಂದು ನೀನು ಕೇಳುವದೇನು? ಆ ಹೆಸರು ರಹಸ್ಯವಾದದ್ದು ಅಂದನು.
ಹಾಗೆಯೇ ಅವನು ಅಲ್ಲಿಂದ ಹೊರಟು ಶಾಫಾ ಟನ ಮಗನಾದ ಎಲೀಷನನ್ನು ಕಂಡುಕೊಂಡನು; ಅವನು ತನ್ನ ಮುಂದೆ ಇರುವ ಹನ್ನೆರಡು ಜೋಡು ಎತ್ತುಗಳಿಂದ ಉಳುತ್ತಿದ್ದನು; ಅವನು ಹನ್ನೆರಡನೇ ಜೋಡಿನ ಸಂಗಡ ಇದ್ದನು. ಎಲೀಯನು ಅವನ ಪಕ್ಕದಲ್ಲಿ ಹಾದು ಹೋಗಿ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.
ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
ಇನ್ನೂ ಏನು ಹೇಳಬೇಕು? ಗಿಡಿಯೋನ್ ಬಾರಾಕ್ ಸಂಸೋನ್ ಎಫ್‌ಥ ದಾವೀದ್ ಸಮುವೇಲ್ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು.