ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.
Cross references
ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಸಹೋದರರಿಗೆ ದಾಸಾನುದಾಸನಾ ಗಿರುವನು ಅಂದನು. ಅವನು--
ನಿನ್ನ ಮಧ್ಯದಲ್ಲಿರುವ ಪರವಾಸಿ ಮೇಲೆ ಮೇಲಕ್ಕೆ ನಿನ್ನ ಮೇಲೆ ಏರುವನು; ಆದರೆ ನೀನು ಕೆಳ ಕೆಳಗೆ ಇಳಿಯುವಿ.
ಆದರೆ ಹೋರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯನ ದಾಸನಾದ ಟೋಬೀಯನೂ ಅರಬಿ ಯನಾದ ಗೆಷೆಮನೂ ಇದನ್ನು ಕೇಳಿದಾಗ ಅವರು ನಮ್ಮನ್ನು ಗೇಲಿಮಾಡಿ ತಿರಸ್ಕರಿಸಿ--ನೀವು ಮಾಡುವ ಈ ಕಾರ್ಯವೇನು? ನೀವು ಅರಸನಿಗೆ ವಿರೋಧವಾಗಿ ತಿರಿಗಿ ಬೀಳುವಿರೋ ಅಂದರು.ಆಗ ನಾನು ಅವರಿಗೆ ಪ್ರತ್ಯುತ್ತರವಾಗಿ--ಪರಲೋಕದ ದೇವರು ನಮಗೆ ಸಫಲ ಮಾಡುವನು; ಆತನ ಸೇವಕರಾದ ನಾವು ಎದ್ದು ಕಟ್ಟುವೆವು. ಆದರೆ ನಿಮಗೆ ಯೆರೂಸಲೇಮಿನಲ್ಲಿ ಪಾಲಾದರೂ ಹಕ್ಕಾದರೂ ಜ್ಞಾಪಕಾರ್ಥವಾದ ಗುರುತಾದರೂ ಇಲ್ಲವೆಂದು ಹೇಳಿದನು.
ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.
ಅವನ ಮಕ್ಕಳು ಭದ್ರತೆಗೆ ದೂರವಾಗಿ ದ್ದಾರೆ; ತಪ್ಪಿಸುವವನಿಲ್ಲದೆ (ಅವರು) ಬಾಗಿಲಲ್ಲಿ ಜಜ್ಜ ಲ್ಪಡುವರು.
ನಾನು ದುಷ್ಟನಲ್ಲವೆಂದೂ ನಿನ್ನ ಕೈಯಿಂದ ತಪ್ಪಿಸುವವನಿಲ್ಲ ವೆಂದೂ ನೀನು ತಿಳುಕೊಳ್ಳುತ್ತೀಯಲ್ಲವೇ;
ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
ದೇವರನ್ನು ಮರೆತು ಬಿಡುವವರೇ, ನಾನು ನಿಮ್ಮನ್ನು ಹರಿದು ಚೂರುಮಾಡ ದಂತೆ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವವರು ಯಾರೂ ಇರುವದಿಲ್ಲವೆಂಬದನ್ನು ಗ್ರಹಿಸಿಕೊಳ್ಳಿರಿ.ಸ್ತೊತ್ರವನ್ನು ಅರ್ಪಿಸುವವನು ನನ್ನನ್ನು ಘನ ಪಡಿಸುತ್ತಾನೆ; ತನ್ನ ನಡವಳಿಕೆಯನ್ನು ಕ್ರಮಪಡಿಸಿ ಕೊಳ್ಳುವವನಿಗೆ ದೇವರ ರಕ್ಷಣೆಯನ್ನು ನಾನು ತೋರಿಸುವೆನು.
ಆಳುವ ದಾಸನು, ಹೊಟ್ಟೆತುಂಬಿದ ನೀಚನು,
ಹೌದು, ಅಂದಿನಿಂದಲೇ ನಾನಿದ್ದೇನೆ; ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ; ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು?
ಈಗ ಅವಳ ತುಚ್ಛತನವನ್ನು ಅವಳ ಮಿಂಡರ ಕಣ್ಣುಗಳ ಮುಂದೆ ಬಯಲು ಪಡಿಸುವೆನು; ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.
ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವದೇ ಇಲ್ಲ ಎಂದು ಕರ್ತನು ಅನ್ನುತ್ತಾನೆ; ಆದರೆ ಇಗೋ, ನಾನು ಒಬ್ಬೊ ಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ತನ್ನ ಅರಸನ ಕೈಗೂ ಒಪ್ಪಿಸುವೆನು; ಅವರು ದೇಶವನ್ನು ಹೊಡೆ ಯುವರು; ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವದಿಲ್ಲ.