Home Bibles ಸಾಮೇತಿಗಳು 30:22 · ಕನ್ನಡ ಬೈಬಲ್
ಸಾಮೇತಿಗಳು 30:22 · ಕನ್ನಡ ಬೈಬಲ್

ಆಳುವ ದಾಸನು, ಹೊಟ್ಟೆತುಂಬಿದ ನೀಚನು,

Cross references

1 ಸಮುವೇಲ 25:2

ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.

1 ಸಮುವೇಲ 25:3

ಈ ಮನುಷ್ಯನ ಹೆಸರು ನಾಬಾಲನು; ಅವನ ಹೆಂಡತಿಯ ಹೆಸರು ಅಬೀಗೈಲ್‌. ಆ ಸ್ತ್ರೀಯು ಮಹಾ ಬುದ್ಧಿವಂತೆಯೂ ಸೌಂದರ್ಯವತಿಯೂ ಆಗಿದ್ದಳು. ಆದರೆ ಆ ಮನುಷ್ಯನು--ಕಠಿಣ ಸ್ವಭಾವದವನಾಗಿಯೂ ತನ್ನ ಕ್ರಿಯೆಗಳಲ್ಲಿ ಕೆಟ್ಟವನಾಗಿಯೂ ಇದ್ದನು; ಅವನು ಕಾಲೇಬನ ವಂಶಸ್ಥನು.

1 ಸಮುವೇಲ 25:10

ನಾಬಾಲನು ದಾವೀದನ ಸೇವಕರಿಗೆ ಪ್ರತ್ಯುತ್ತರವಾಗಿ--ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಇದ್ದಾರೆ.

1 ಸಮುವೇಲ 25:25

ನನ್ನ ಒಡೆಯನು, ದಯಮಾಡಿ ಬೆಲಿಯಾಳನ ಈ ಮನುಷ್ಯ ನಾದ ನಾಬಾಲನ ಮೇಲೆ ಗಮನ ಇಡದೆ ಇರಲಿ. ಯಾಕಂದರೆ ಅವನ ಹೆಸರು ಹೇಗೋ ಹಾಗೆಯೇ ಅವನು ನಾಬಾಲನೆಂಬ ಹೆಸರುಳ್ಳವನು, ಮೂರ್ಖ ತನವು ಅವನ ಸಂಗಡ ಇರುವದು. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಯೌವನಸ್ಥರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ.

1 ಸಮುವೇಲ 25:36

ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.

1 ಸಮುವೇಲ 30:16

ಇವನು ದಾವೀದನನ್ನು ಕರಕೊಂಡು ಅಲ್ಲಿಗೆ ಹೋದಾಗ ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶ ದಲ್ಲಿಯೂ ಯೆಹೂದ ದೇಶದಲ್ಲಿಯೂ ವ್ಯಾಪಿಸಿ ಕೊಂಡು ಎಲ್ಲಾ ಕೊಳ್ಳೆತಕ್ಕೊಂಡು ಬಂದದರಿಂದ ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.

ಸಾಮೇತಿಗಳು 19:10

ಬುದ್ಧಿಹೀನನಿಗೆ ಆನಂದವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವದು ಸೇವಕ ನಿಗೆ ಯುಕ್ತವೇ ಅಲ್ಲ.

ಸಾಮೇತಿಗಳು 28:3

ಬಡವರನ್ನು ಹಿಂಸಿಸುವ ದರಿದ್ರನು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.

ಸಭಾಪ್ರಸಂಗಿ 10:7

ನಾನು ಕುದುರೆಗಳ ಮೇಲೆ ಸೇವಕರನ್ನೂ ಮತ್ತು ಪ್ರಭುಗಳು ಸೇವಕರ ಹಾಗೆ ಭೂಮಿಯ ಮೇಲೆ ನಡೆಯುವದನ್ನೂ ನೋಡಿದ್ದೇನೆ.

ಯೆಶಾಯ 3:4

ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು.

Interlinear

Choose Theme