Home Bibles ವಿಲಾಪಗಳು 3:58 · ಕನ್ನಡ ಬೈಬಲ್
ವಿಲಾಪಗಳು 3:58 · ಕನ್ನಡ ಬೈಬಲ್

ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ.

Cross references

ಆದಿಕಾಂಡ 48:16

ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್‌ ಇಸಾಕ್‌ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.

1 ಸಮುವೇಲ 25:39

ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು.

ಯೋಬ 35:14

ನೀನು ಅವನನ್ನು ದೃಷ್ಟಿಸುವ ದಿಲ್ಲವೆಂದು ನೀನು ಹೇಳಿದರೂ ನ್ಯಾಯತೀರ್ಪು ಅವನ ಮುಂದೆ ಇರುವದು; ಆದದರಿಂದ ನೀನು ಆತನಲ್ಲಿ ಭರವಸವಿಡು.

ಕೀರ್ತನೆಗಳು 9:5

ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.

ಕೀರ್ತನೆಗಳು 34:22

ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ.

ಕೀರ್ತನೆಗಳು 71:23

ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.ನನ್ನ ನಾಲಿಗೆಯು ಸಹ ದಿನವೆಲ್ಲಾ ನಿನ್ನ ನೀತಿಯನ್ನು ಮಾತನಾಡುವದು; ನನಗೆ ಕೇಡನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡುತ್ತಾರೆ.

ಕೀರ್ತನೆಗಳು 103:4

ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು

ಯೆಶಾಯ 51:22

ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.ಆದರೆ ನಾವು ಹಾದುಹೋಗುವಂತೆ ಬಗ್ಗಿಕೋ ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ; ನೀನು ಹಾದುಹೋಗುವ ವರಿಗೆ ನಿನ್ನ ಶರೀರವನ್ನು ನೆಲದಂತೆಯೂ ಬೀದಿ ಯಂತೆಯೂ ಇಟ್ಟಿಯಲ್ಲಾ.

ಯೆರೆಮಿಯ 31:11

ಆಗ ನಾನು ಆಜ್ಞೆ ನಿಯಮಗಳ ಪ್ರಕಾರ ಮುದ್ರೆ ಹಾಕಿದ ಕ್ರಯಪತ್ರವನ್ನೂ ತೆರೆದಿರುವದನ್ನೂ ತಕ್ಕೊಂಡೆನು.

ಯೆರೆಮಿಯ 38:13

ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.

ಯೆರೆಮಿಯ 50:34

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.

Interlinear

Choose Theme