Home Bibles ಆದಿಕಾಂಡ 48:16 · ಕನ್ನಡ ಬೈಬಲ್
ಆದಿಕಾಂಡ 48:16 · ಕನ್ನಡ ಬೈಬಲ್

ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್‌ ಇಸಾಕ್‌ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.

Cross references

ಆದಿಕಾಂಡ 1:21

ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು. ದೇವರು ಅದನ್ನು ಒಳ್ಳೆಯದೆಂದು ನೋಡಿದನು.

ಆದಿಕಾಂಡ 16:7

ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು

ಆದಿಕಾಂಡ 22:15

ಕರ್ತನ ದೂತನು ಆಕಾಶದೊಳಗಿಂದ ಎರಡ ನೆಯ ಸಾರಿ ಅಬ್ರಹಾಮನನ್ನು ಕರೆದನು.

ಆದಿಕಾಂಡ 28:13

ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.

ಆದಿಕಾಂಡ 31:11

ಆಗ ದೇವದೂತನು ಸ್ವಪ್ನದಲ್ಲಿ ನನಗೆ ಯಾಕೋಬನೇ ಅಂದನು. ಅದಕ್ಕೆ ನಾನು--ಇಲ್ಲಿ ಇದ್ದೇನೆ ಅಂದೆನು.

ಆದಿಕಾಂಡ 32:28

ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.

ಆದಿಕಾಂಡ 48:5

ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್‌ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್‌ ಸಿಮೆಯೋನ್‌ ಇವ ರಂತೆ ನನ್ನವರಾಗಿರಬೇಕು.

ಆದಿಕಾಂಡ 49:22

ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ.

ನಿರ್ಗಮಕಾಂಡ 1:7

ಆದರೆ ಇಸ್ರಾಯೇಲನ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿ ಹೊಂದಿ ಹೆಚ್ಚಿ ಹರಡಿಕೊಂಡು ಬಲಗೊಂಡರು. ಆ ದೇಶವು ಅವರಿಂದ ತುಂಬಿತು.

ನಿರ್ಗಮಕಾಂಡ 3:2

ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ.

ನಿರ್ಗಮಕಾಂಡ 23:20

ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ.

ಅಂಕೆಗಳ ಪುಸ್ತಕ 1:46

ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು.

ಅಂಕೆಗಳ ಪುಸ್ತಕ 26:28

ಕುಟುಂಬಗಳ ಪ್ರಕಾರ ಯೋಸೇಫನ ಕುಮಾ ರರು: ಮನಸ್ಸೆಯೂ ಎಫ್ರಾಯಾಮನೂ. ಮನಸ್ಸೆಯ ಕುಮಾರರು: ಮಾಕೀರನಿಂದ ಮಾಕೀರ್ಯರ ಕುಟುಂಬ.

ಅಂಕೆಗಳ ಪುಸ್ತಕ 26:34

ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ.

ದ್ವಿತೀಯೋಪದೇಶಕಾಂಡ 28:10

ಆಗ ನೀನು ಕರ್ತನ ಹೆಸರಿನಿಂದ ಕರೆಯಲ್ಪಡುವದನ್ನು ಭೂಮಿಯ ಜನಗಳೆಲ್ಲಾ ನೋಡಿ ನಿನಗೆ ಭಯಪಡುವರು;

ದ್ವಿತೀಯೋಪದೇಶಕಾಂಡ 33:17

ಅವನ ಚೊಚ್ಚಲ ಹೋರಿಯಂತೆ ಅವನಿಗೆ ಪ್ರಭೆ ಇರುವದು; ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇವೆ. ಅವುಗಳಿಂದ ಜನಗಳನ್ನು ಒಟ್ಟಿಗೆ ಭೂಮಿಯ ಅಂತ್ಯಗಳ ವರೆಗೆ ನೂಕುತ್ತಾನೆ. ಇವು ಎಫ್ರಾಯಾಮನ ಹತ್ತು ಸಾವಿರಗಳೂ ಇವು ಮನಸ್ಸೆಯ ಸಹಸ್ರವೂ ಆಗಿವೆ ಎಂದು ಹೇಳಿದನು.

ಯೆಹೋಶುವ 17:17

ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯಾಮನಿಗೂ ಮನಸ್ಸೆಗೂ--ನೀವು ಮಹಾ ಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವದು;ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.

ನ್ಯಾಯಾಧಿಪತಿಗಳು 2:1

ಕರ್ತನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು--ನಾನು ನಿಮ್ಮನ್ನು ಐಗುಪ್ತ ದಿಂದ ಬರಮಾಡಿ ನಿಮ್ಮ ತಂದೆಗಳಿಗೆ ಆಣೆಯಿಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದೆನು. ನಾನು ನಿಮ್ಮ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಎಂದಿಗೂ ನಿರರ್ಥಕ ಮಾಡೆನು.

ನ್ಯಾಯಾಧಿಪತಿಗಳು 6:21

ಆಗ ಕರ್ತನ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆ ಯಿಂದ ಎದ್ದು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿ ಗಳನ್ನೂ ದಹಿಸಿಬಿಟ್ಟಿತು. ಆಗ ಕರ್ತನ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.

ನ್ಯಾಯಾಧಿಪತಿಗಳು 13:21

ಆದರೆ ಕರ್ತನ ದೂತನು ಮಾನೋಹನಿಗೂ ಅವನ ಹೆಂಡತಿಗೂ ತಿರಿಗಿ ಕಾಣಿಸ ಲಿಲ್ಲ. ಆಗ ಇವನು ಕರ್ತನ ದೂತನೆಂದು ಮಾನೋಹನು ತಿಳುಕೊಂಡನು. ಮಾನೋಹನು ತನ್ನ ಹೆಂಡತಿಗೆ--ನಾವು ದೇವರನ್ನು ಕಂಡದ್ದರಿಂದ ನಿಶ್ಚಯ ವಾಗಿ ಸಾಯುವೆವು ಅಂದನು.

2 ಸಮುವೇಲ 4:9

ಆಗ ದಾವೀದನು ಬೇರೋತಿನ ಮಗನಾ ಗಿರುವ ರಿಮ್ಮೋನನ ಮಕ್ಕಳಾದ ರೇಕಾಬಿಗೂ ಅವನ ಸಹೋದರನಾದ ಬಾಣನಿಗೂ ಪ್ರತ್ಯುತ್ತರವಾಗಿ--ಎಲ್ಲಾ ಇಕ್ಕಟ್ಟಿನಿಂದ ನನ್ನ ಪ್ರಾಣವನ್ನು ವಿಮೋಚಿಸಿದ ಕರ್ತನ ಜೀವದಾಣೆ, ತನ್ನ ಕಣ್ಣಿಗೆ ಸುವರ್ತಮಾನವನ್ನು ತಂದವನು ಎಂದು ಕಾಣಿಸಿಕೊಂಡವನಾಗಿ ನಾನು ತನ್ನ ವರ್ತಮಾನಕ್ಕೋಸ್ಕರ ಬಹುಮಾನವನ್ನು ಕೊಡು ವೆನೆಂದು ನೆನಸಿ

1 ಅರಸುಗಳು 1:29

ನಿನ್ನ ಮಗನಾದ ಸೊಲೊಮೋನನು ನನ್ನ ತರುವಾಯ ಆಳುವನೆಂದೂ

2 ದಿನವೃತ್ತಾಂತ 7:14

ಇಲ್ಲವೆ ನನ್ನ ಜನರ ಮಧ್ಯದಲ್ಲಿ ಜಾಡ್ಯವನ್ನು ಕಳುಹಿಸಿದರೂ ನನ್ನ ಹೆಸರಿನಿಂದ ಕರೆಯಲ್ಪಟ್ಟ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆ ಮಾಡಿ ನನ್ನ ಮುಖವನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ ನಾನು ಆಕಾಶದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ ಅವರ ದೇಶವನ್ನು ಗುಣಮಾಡುವೆನು.

ಕೀರ್ತನೆಗಳು 34:2

ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು.

ಕೀರ್ತನೆಗಳು 34:7

ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.

ಕೀರ್ತನೆಗಳು 34:8

ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ; ಆತನಲ್ಲಿ ಆಶ್ರ ಯಿಸಿಕೊಳ್ಳುವ ಮನುಷ್ಯನು ಧನ್ಯನು.

ಕೀರ್ತನೆಗಳು 34:22

ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ.

ಕೀರ್ತನೆಗಳು 121:7

ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು.ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.

ಯೆಶಾಯ 47:4

ನಮ್ಮ ವಿಮೋಚಕನಿಗಾದರೋ, ಸೈನ್ಯಗಳ ಕರ್ತನು ಎಂಬದೇ ಆತನ ಹೆಸರು, ಆತನೇ ಇಸ್ರಾಯೇಲಿನ ಪರಿಶುದ್ಧನು.

ಯೆಶಾಯ 63:9

ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.

ಯೆರೆಮಿಯ 14:9

ಏಳು ಮಂದಿಯನ್ನು ಹೆತ್ತವಳು ಕುಂದುತ್ತಾಳೆ; ತನ್ನ ಪ್ರಾಣವನ್ನು ಬಿಡುತ್ತಾಳೆ; ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ; ಅವಳು ನಾಚಿಕೆಪಡುತ್ತಾಳೆ; ಅವಮಾನ ಗೊಳ್ಳುತ್ತಾಳೆ; ಇದಲ್ಲದೆ ಅವರ ಶೇಷವನ್ನು ಅದರ ಶತ್ರುಗಳ ಮುಂದೆ ಕತ್ತಿಗೆ ಒಪ್ಪಿಸುವೆನು ಎಂದು ಕರ್ತನು ಅನ್ನುತ್ತಾನೆ.

ಹೊಶೇಯ 12:4

ಹೌದು, ದೂತನ ಮೇಲೆ ಅವನು ಬಲಹೊಂದಿ ಜಯಿಸಿದನು; ಅವನು ಅತ್ತು ಆತನಿಗೆ ವಿಜ್ಞಾಪನೆಯನ್ನು ಸಲ್ಲಿಸಿದನು; ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು; ಅಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು.

ಆಮೋಸ 9:12

ಆಗ ಅವರು ಎದೋ ಮಿನ ಮಿಕ್ಕಭಾಗವನ್ನೂ ನನ್ನ ಹೆಸರಿನಿಂದ ಕರೆಯಲ್ಪ ಡುವ ಎಲ್ಲಾ ಅನ್ಯಜನಾಂಗಗಳನ್ನೂ ಸ್ವಾಧೀನಮಾಡಿ ಕೊಳ್ಳುವರೆಂದು ಇದನ್ನು ಮಾಡುವವನಾದ ಕರ್ತನು ಹೇಳುತ್ತಾನೆ.

ಮಲಾಕಿ 3:1

ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ.

ಮತ್ತಾಯ 6:13

ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.

ಯೋಹಾನ 17:15

ನೀನು ಅವರನ್ನು ಲೋಕದೊಳಗಿಂದ ತೆಗೆಯಬೇಕೆಂತಲ್ಲ; ಅವರನ್ನು ಕೇಡಿನಿಂದ ಕಾಪಾಡಬೇಕೆಂದು ನಾನು ಕೇಳಿಕೊಳ್ಳು ತ್ತೇನೆ.

ಅಪೋಸ್ತಲರ ಕೃತ್ಯಗಳು 7:30

ನಾಲ್ವತ್ತು ವರುಷ ತುಂಬಿದ ಮೇಲೆ ಸೀನಾಯಿ ಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.

ಅಪೋಸ್ತಲರ ಕೃತ್ಯಗಳು 15:17

ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.

ರೋಮಾಪುರದವರಿಗೆ 8:23

ಇದು ಮಾತ್ರವಲ್ಲದೆ ಆತ್ಮನ ಪ್ರಥಮ ಫಲವನ್ನು ಹೊಂದಿದ ನಾವು ಸಹ ದತ್ತುಪುತ್ರ ಸ್ವೀಕಾರವನ್ನು ಅಂದರೆ ದೇಹಕ್ಕೆ ಬರಬೇಕಾದ ವಿಮೋಚನೆಯನ್ನು ಎದುರುನೊಡುತ್ತಾ ನಮ್ಮೊಳಗೆ ನಾವೇ ಮೂಲ್ಗುತ್ತೇವೆ.

1 ಕೊರಿಂಥದವರಿಗೆ 10:4

ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.

Interlinear

Choose Theme