Home Bibles ಯೆರೆಮಿಯ 38:13 · ಕನ್ನಡ ಬೈಬಲ್
ಯೆರೆಮಿಯ 38:13 · ಕನ್ನಡ ಬೈಬಲ್

ಹೀಗೆ ಕಾವಲು ದಂಡಿನ ಅಧಿಪತಿ ಯಾದ ನೆಬೂಜರದಾನನನ್ನೂ ನೆಬೂಷಜ್ಬಾನನನ್ನೂ ರಬ್‌ಶೇರಿಸ್‌ನನ್ನೂ ನೇರ್ಗಲ್‌ಸರೇಚರನನ್ನೂ ರಬ್ಮಾಗ ನನ್ನೂ ಬಾಬೆಲಿನ ಅರಸನ ಪ್ರಧಾನರೆಲ್ಲರನ್ನೂ ಕಳುಹಿಸಿದನು.

Cross references

ಆದಿಕಾಂಡ 37:28

ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.

1 ಅರಸುಗಳು 22:27

ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು.

ಸಾಮೇತಿಗಳು 29:10

ಕೊಲೆಪಾತಕರು ನೀತಿವಂತರನ್ನು ದ್ವೇಷಿಸು ತ್ತಾರೆ; ಯಥಾರ್ಥವಂತರು ಅವನ ಪ್ರಾಣವನ್ನು ಹುಡು ಕುತ್ತಾರೆ.

ಯೆರೆಮಿಯ 32:2

ಹೇಗಂದರೆ--ಅದನ್ನು ಮಾಡುವ ಕರ್ತನೂ ಅದನ್ನು ಸ್ಥಾಪಿಸುವದಕ್ಕಾಗಿ ಅದನ್ನು ರೂಪಿಸಿದ ಕರ್ತನೂ ಕರ್ತನೆಂಬ ಹೆಸರುಳ್ಳಾತನೂ ಹೇಳುವದೇನಂದರೆ-

ಯೆರೆಮಿಯ 37:21

ಆದರೆ ನೀನು ಹೊರಗೆ ಹೋಗಲು ಮನಸ್ಸಿ ಲ್ಲದ ಪಕ್ಷದಲ್ಲಿ ಕರ್ತನು ನನಗೆ ತೋರಿಸಿದ ಮಾತು ಇದೇ--

ಯೆರೆಮಿಯ 38:6

ಬಾಬೆಲಿನ ಅರಸನು ಚಿದ್ಕೀಯನ ಕುಮಾರರನ್ನು ರಿಬ್ಲದಲ್ಲಿ ಅವನ ಕಣ್ಣುಗಳ ಮುಂದೆ ಕೊಂದುಹಾಕಿದನು; ಯೆಹೂದದ ಘನವುಳ್ಳವರೆಲ್ಲ ರನ್ನು ಸಹ ಬಾಬೆಲಿನ ಅರಸನು ಕೊಂದುಹಾಕಿದನು.

ಯೆರೆಮಿಯ 39:14

ಅವನಿಗೆ ಹೇಳಿದ್ದೇ ನಂದರೆ--ಅಮ್ಮೋನ್ಯನ ಮಕ್ಕಳ ಅರಸನಾದ ಬಾಲೀ ಸನು ನಿನ್ನನ್ನು ಕೊಂದುಹಾಕುವದಕ್ಕೆ ನೆತನ್ಯನ ಮಗ ನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದದೆಯೋ? ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.

ವಿಲಾಪಗಳು 3:58

ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ.

ಅಪೋಸ್ತಲರ ಕೃತ್ಯಗಳು 23:35

ನಿನ್ನ ಮೇಲೆ ತಪ್ಪು ಹೊರಿಸುವವರು ಬಂದಾಗ ನಾನು ನಿನ್ನನ್ನು ವಿಚಾರಣೆ ಮಾಡುವೆನು ಎಂದು ಹೇಳಿ ಅವನನ್ನು ಹೆರೋದನ ನ್ಯಾಯಾಲಯದಲ್ಲಿ ಇಟ್ಟು ಕಾಯಬೇಕೆಂದು ಅಪ್ಪಣೆ ಕೊಟ್ಟನು.

ಅಪೋಸ್ತಲರ ಕೃತ್ಯಗಳು 24:23

ಪೌಲನು ಕಾವಲಲ್ಲಿ ಬಿಡುವಾಗಿದ್ದು ಅವನ ಪರಿ ಚಿತರು ಉಪಚಾರ ಮಾಡುವದಕ್ಕೆ ಅವನ ಬಳಿಗೆ ಬರುವ ಯಾರನ್ನೂ ಅಡ್ಡಿ ಮಾಡಬಾರದೆಂದು ಒಬ್ಬ ಶತಾಧಿಪತಿಗೆ ಅಪ್ಪಣೆ ಕೊಟ್ಟನು.

ಅಪೋಸ್ತಲರ ಕೃತ್ಯಗಳು 28:16

ನಾವು ರೋಮ್‌ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.

ಅಪೋಸ್ತಲರ ಕೃತ್ಯಗಳು 28:30

ಪೌಲನು ತನ್ನ ಸ್ವಂತ ಬಾಡಿಗೆಯ ಮನೆಯಲ್ಲಿ ಪೂರಾ ಎರಡು ವರಷವಿದ್ದು ತನ್ನ ಬಳಿಗೆ ಬರುವವರ ನ್ನೆಲ್ಲಾ ಸೇರಿಸಿಕೊಂಡನು.ಅವನು ತುಂಬಾ ಧೈರ್ಯ ದೊಂದಿಗೆ ದೇವರರಾಜ್ಯವನ್ನು ಸಾರುತ್ತಾ ಕರ್ತನಾದ ಯೇಸು ಕ್ರಿಸ್ತನ ವಿಷಯವಾದವುಗಳನ್ನು ಬೋಧಿಸುತ್ತಿ ದ್ದನು. ಯಾವ ಮನುಷ್ಯನೂಅವನಿಗೆ ಅಡ್ಡಿಮಾಡಲಿಲ್ಲ.

Interlinear

Choose Theme