Home Bibles ಯೆಹೋಶುವ 2:22 · ಕನ್ನಡ ಬೈಬಲ್
ಯೆಹೋಶುವ 2:22 · ಕನ್ನಡ ಬೈಬಲ್

ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು.

Cross references

1 ಸಮುವೇಲ 19:10

ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಯತ್ನಿಸಿದನು; ಆದರೆ ಇವನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಈಟಿಯು ಗೋಡೆಯಲ್ಲಿ ಹತ್ತಿ ಕೊಳ್ಳುವಂತೆ ಅವನು ಹೊಡೆದನು. ದಾವೀದನು ಆ ರಾತ್ರಿಯಲ್ಲಿ ಓಡಿಹೋಗಿ ತಪ್ಪಿಸಿಕೊಂಡನು.

2 ಸಮುವೇಲ 17:20

ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು.

ಕೀರ್ತನೆಗಳು 32:6

ಇದಕ್ಕೋಸ್ಕರ ಭಕ್ತರೆಲ್ಲರು ನಿನ್ನನ್ನು ಕಂಡುಕೊಳ್ಳುವ ಕಾಲದಲ್ಲಿ ನಿನಗೆ ಪ್ರಾರ್ಥನೆ ಮಾಡುವರು; ನಿಶ್ಚಯವಾಗಿ ಬಹಳ ನೀರಿನ ಪ್ರವಾಹ ಗಳು ಅವನ ಸವಿಾಪಕ್ಕೆ ಬರುವದಿಲ್ಲ.

Interlinear

Choose Theme