Home Bibles 2 ಸಮುವೇಲ 17:20 · ಕನ್ನಡ ಬೈಬಲ್
2 ಸಮುವೇಲ 17:20 · ಕನ್ನಡ ಬೈಬಲ್

ಅಬ್ಷಾಲೋಮನ ಸೇವಕರು ಮನೆಯೊಳಗೆ ಬಂದು ಆ ಸ್ತ್ರೀಯನ್ನು--ಅಹೀಮಾ ಚನೂ ಯೋನಾತಾನನೂ ಎಲ್ಲಿ ಎಂದು ಕೇಳಿದಾಗ ಅವಳು ಅವರಿಗೆ--ಹಳ್ಳವನ್ನು ದಾಟಿಹೋದರು ಅಂದಳು. ಅವರು ಹುಡುಕಿ ಕಾಣದೆ ಹೋಗಿ ಯೆರೂಸಲೇಮಿಗೆ ಹಿಂತಿರುಗಿದರು.

Cross references

ನಿರ್ಗಮಕಾಂಡ 1:19

ಅದಕ್ಕೆ ಅವರು--ಇಬ್ರಿಯರ ಸ್ತ್ರೀಯರು ಐಗುಪ್ತದ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯು ಅವರ ಹತ್ತಿರ ಬರುವದಕ್ಕೆ ಮುಂಚೆಯೇ ಹೆರುತ್ತಾರೆ ಅಂದರು.

ಯೆಹೋಶುವ 2:3

ಆಗ ಯೆರಿಕೋವಿನ ಅರಸನು ರಾಹಾಬಳ ಬಳಿಗೆ ಕಳುಹಿಸಿ--ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರಕೊಂಡು ಬಾ. ಅವರು ದೇಶವನ್ನೆಲ್ಲಾ ಶೋಧಿಸಲು ಬಂದಿದ್ದಾರೆ ಅಂದನು.

ಯೆಹೋಶುವ 2:4

ಸ್ತ್ರೀಯು ಆ ಇಬ್ಬರನ್ನು ಅಡಗಿ ಸಿಟ್ಟು--ನನ್ನ ಬಳಿಗೆ ಮನುಷ್ಯರು ಬಂದಿದ್ದರು; ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು.

ಯೆಹೋಶುವ 2:22

ಅವರು ಹೋಗಿ ಬೆಟ್ಟಕ್ಕೆ ಸೇರಿ ಹಿಂದಟ್ಟುವವರು ತಿರಿಗಿ ಬರುವ ಪರಿಯಂತರ ಮೂರು ದಿವಸ ಅಲ್ಲೇ ಇದ್ದರು. ಹಿಂದಟ್ಟುವವರು ಮಾರ್ಗದಲ್ಲೆಲ್ಲಾ ಅವ ರನ್ನು ಹುಡುಕಿ ಕಾಣದೆ ಹೋದರು.

ನ್ಯಾಯಾಧಿಪತಿಗಳು 4:20

ತಿರಿಗಿ ಅವನು ಅವಳಿಗೆನೀನು ಬಾಗಲಲ್ಲಿ ನಿಂತಿರು; ಯಾವನಾದರೂ ಬಂದು ಇಲ್ಲಿ ಯಾರಾದರೂ ಇದ್ದಾರೋ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು ಅಂದನು.

1 ಸಮುವೇಲ 19:12

ವಿಾಕಲಳು ದಾವೀದನನ್ನು ಕಿಟಕಿಯ ಮಾರ್ಗವಾಗಿ ಇಳಿಸಿಬಿಟ್ಟಳು; ಅವನು ತಪ್ಪಿಸಿಕೊಂಡು ಓಡಿಹೋದನು.

1 ಸಮುವೇಲ 21:2

ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.

1 ಸಮುವೇಲ 27:11

ದಾವೀದನು ಹೀಗೇಕೆ ಮಾಡಿದ ನೆಂದೂ ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸ ವಾಗಿರುವ ದಿನಗಳೆಲ್ಲಾ ಇದು ಅವನ ಮರ್ಯಾದೆ ಎಂದೂ ಅವರು ತನಗೆ ವಿರೋಧವಾಗಿ ಗತ್‌ ಪಟ್ಟಣಕ್ಕೆ ವರ್ತಮಾನವನ್ನು ತಕ್ಕೊಂಡು ಬಾರದ ಹಾಗೆ ಒಬ್ಬ ಪುರುಷನನ್ನಾದರೂ ಸ್ತ್ರೀಯನ್ನಾದರೂ ಬದುಕಗೊಡಿ ಸಲಿಲ್ಲ.ಆಕೀಷನು ದಾವೀದನನ್ನು ನಂಬಿ--ಇವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಅಸಹ್ಯವಾದನು. ಆದದರಿಂದ ಇವನು ಎಂದೆಂದಿಗೂ ನನ್ನ ದಾಸನಾಗಿ ರುವನು ಅಂದನು.

2 ಸಮುವೇಲ 15:34

ನಾನು ಇಂದಿನ ವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು ಎಂದು ಹೇಳುವುದಾದರೆ ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆ ಯನ್ನು ವ್ಯರ್ಥಮಾಡಬಹುದು.

Interlinear

Choose Theme