ನೀವು ದೇಶವನ್ನು ಏಳು ಪಾಲಾಗಿ ವಿವರಿಸಬೇಕು ಮತ್ತು ಅದರ ವಿವರಗಳನ್ನು ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವೆನು.
Cross references
ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು.
ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾ ಪಿಸಿ--ನೀವು ಚೀಟಿನಿಂದ ಸ್ವಾಧೀನಪಡಿಸಿಕೊಳ್ಳ ಬೇಕಾದ ದೇಶವು ಒಂಭತ್ತುವರೆ ಗೋತ್ರಗಳಿಗೆ ಕೊಡ ಬೇಕೆಂದು ಕರ್ತನು ಆಜ್ಞಾಪಿಸಿದ ದೇಶವು ಇದೇ.
ಅವರ ಕರ್ತನು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಹಾಗೆಯೇ ಒಂಭತ್ತೂವರೆ ಗೋತ್ರಗಳಿಗೆ ಚೀಟುಗಳನ್ನು ಹಾಕಿ ಬಾಧ್ಯವಾಗಿ ಪಾಲು ಹಂಚಿದರು.
ಆ ಮನುಷ್ಯರು ಹೊರಟುಹೋದರು. ಯೆಹೋಶುವನು ದೇಶವನ್ನು ವಿವರಿಸುವದಕ್ಕಾಗಿ ಹೋದವರಿಗೆ ಅಪ್ಪಣೆ ಕೊಟ್ಟು--ನೀವು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಅದರ ವಿವರಣೆಯನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿ; ನಾನು ಶೀಲೋವಿನಲ್ಲಿ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ತಿರಿಗಿ ಬರಲಿ ಎಂದು ಹೇಳಿದನು.
ಆಗ ಯೆಹೋಶುವನು ಶೀಲೋವಿನಲ್ಲಿ ಕರ್ತನ ಮುಂದೆ ಚೀಟುಗಳನ್ನು ಹಾಕಿ ಇಸ್ರಾಯೇಲ್ ಮಕ್ಕಳಿಗೆ ದೇಶವನ್ನು ಅವರ ಪಾಲುಗಳ ಪ್ರಕಾರ ಹಂಚಿಕೊಟ್ಟನು.
ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.
ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.
ಚೀಟು ಕಲಹಗಳನ್ನು ನಿಲ್ಲಿಸಿ ಬಲಿಷ್ಠರನ್ನು ಅಗಲಿಸುತ್ತದೆ;
ಕಾನಾನ್ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.