Home Bibles ಸಾಮೇತಿಗಳು 16:33 · ಕನ್ನಡ ಬೈಬಲ್
ಸಾಮೇತಿಗಳು 16:33 · ಕನ್ನಡ ಬೈಬಲ್

ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.

Cross references

ಲೇವ್ಯಕಾಂಡ 16:8

ಆರೋನನು ಆ ಎರಡು ಆಡುಗಳಿಗಾಗಿ ಚೀಟು ಹಾಕಬೇಕು; ಒಂದು ಚೀಟು ಕರ್ತನಿಗೋಸ್ಕರ ಮತ್ತೊಂದು ಚೀಟು ಪಾಪ ಪಶುವಿ ಗೋಸ್ಕರ.

ಅಂಕೆಗಳ ಪುಸ್ತಕ 26:55

ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು.

ಯೆಹೋಶುವ 7:14

ಆದದರಿಂದ ಹೊತ್ತಾರೆಯಲ್ಲಿ ನಿಮ್ಮ ಗೋತ್ರಗಳ ಪ್ರಕಾರವೇ ಸೇರಿ ಬನ್ನಿರಿ. ಆಗ ಕರ್ತನು ಹಿಡಿಯುವ ಗೋತ್ರವು ಕುಟುಂಬದ ಪ್ರಕಾರ ವಾಗಿಯೂ ಕರ್ತನು ಹಿಡಿಯುವ ಕುಟುಂಬವು ಮನೆ ಮನೆಯಾಗಿಯೂ ಕರ್ತನು ಹಿಡಿಯುವ ಮನೆಯಲ್ಲಿ ಒಬ್ಬೊಬ್ಬರಾಗಿಯೂ ಸೇರಲಿ.

ಯೆಹೋಶುವ 18:5

ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.

ಯೆಹೋಶುವ 18:10

ಆಗ ಯೆಹೋಶುವನು ಶೀಲೋವಿನಲ್ಲಿ ಕರ್ತನ ಮುಂದೆ ಚೀಟುಗಳನ್ನು ಹಾಕಿ ಇಸ್ರಾಯೇಲ್‌ ಮಕ್ಕಳಿಗೆ ದೇಶವನ್ನು ಅವರ ಪಾಲುಗಳ ಪ್ರಕಾರ ಹಂಚಿಕೊಟ್ಟನು.

ನ್ಯಾಯಾಧಿಪತಿಗಳು 20:9

ಈಗ ನಾವು ಗಿಬೆಯಕ್ಕೆ ಮಾಡುವದು ಇದೇ: ಅದಕ್ಕೆ ವಿರೋಧವಾಗಿ ಚೀಟುಗಳು ಬಿದ್ದ ಪ್ರಕಾರ ಹೋಗೋಣ.

1 ಸಮುವೇಲ 14:41

ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು.

1 ಸಮುವೇಲ 14:42

ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು.

ನೆಹೆಮ್ಯ 11:1

ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು.

ಸಾಮೇತಿಗಳು 18:18

ಚೀಟು ಕಲಹಗಳನ್ನು ನಿಲ್ಲಿಸಿ ಬಲಿಷ್ಠರನ್ನು ಅಗಲಿಸುತ್ತದೆ;

ಸಾಮೇತಿಗಳು 29:26

ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ.ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ.

ಯೋನ 1:7

ಇದಲ್ಲದೆ ಅವರು ಒಬ್ಬರಿಗೊ ಬ್ಬರು--ಬನ್ನಿ, ಚೀಟುಗಳನ್ನು ಹಾಕೋಣ; ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟು ಗಳನ್ನು ಹಾಕಿದಾಗ ಯೋನನ ಮೇಲೆ ಚೀಟು ಬಿತ್ತು.

ಅಪೋಸ್ತಲರ ಕೃತ್ಯಗಳು 1:26

ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು.

Interlinear

Choose Theme